ಯಾನ್ ರಫ್-ಓ ಹರ್ನ್ ಯುದ್ಧ ಮತ್ತು ಸಶಸ್ತ್ರ ಸಂಘರ್ಷದ ಸಂದರ್ಭಗಳಲ್ಲಿ ಸದಾ ತೊಂದರೆಗೊಳಗಾಗುವ ಮುಗ್ಧ ಮಹಿಳೆಯರ ರಕ್ಷಣೆಗಾಗಿ ದನಿಯೆತ್ತಿದವಳು.
ಜಪಾನೀಯರು 1942 ರಲ್ಲಿ ದಾಳಿ ಮಾಡಿ ಜಾವಾ ದ್ವೀಪವನ್ನು ವಶಪಡಿಸಿಕೊಂಡಾಗ ಇಂಡೋನೇಷ್ಯಾದಲ್ಲಿನ ಡಚ್ ವಸಾಹತಿನಲ್ಲಿ ಅರಳಿದ್ದ ಯಾನ್ ರಫ್ ಓ ಹರ್ನ್ಳ ಬಾಲ್ಯದ ಕನಸುಗಳು ಅಪಾರ ಘಾಸಿಗೊಳಿಸಿದವು. ಅವಳ ಕುಟುಂಬದ ಸಮೇತ ಸೆರೆಮನೆಯಲ್ಲಿ ಬಂಧಿಸಿ, ಬಲಾತ್ಕಾರವಾಗಿ ಕರೆದೊಯ್ದು ಜಪಾನ್ ಸೈನ್ಯಕ್ಕೆಂದೇ ಮೀಸಲಾಗಿದ್ದ ವೇಶ್ಯಾ ಗೃಹದಲ್ಲಿ ಲೈಂಗಿಕ ಗುಲಾಮಗಿರಿಗೆ ತಳ್ಳಲಾಯಿತು. ಈ ಹಿನ್ನೆಲೆಯಲ್ಲಿ ತಾನು ಅನುಭವಿಸಿದ ಸಂಕಟ, ನೋವು, ಅವಮಾನ, ನಾಚಿಕೆಗೇಡಿನ ಸಂಗತಿಗಳೆಲ್ಲವನ್ನೂ ತನ್ನ ಆತ್ಮಚರಿತ್ರೆ ’50 ಇಯರ್ಸ್ ಆಫ್ ಸೈಲೆನ್ಸ್’ ಕೃತಿಯಲ್ಲಿ ಹಂಚಿಕೊಂಡಿದ್ದಾರೆ.
ಇದರ ಕನ್ನಡಾನುವಾದವನ್ನು ಲೇಖಕ ಅರುಣ್ ’ಅರೆಶತಮಾನದ ಮೌನ’ ಎಂಬ ಶೀರ್ಷಿಕೆಯಡಿಯಲ್ಲಿ ಹೊರತಂದಿದ್ದಾರೆ.
©2024 Book Brahma Private Limited.