ಅಚ್ಚ ಗನ್ನಡ ನುಡಿಕೋಶ

Author : ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡರು

Pages 513

₹ 360.00




Year of Publication: 1993
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

“ಅಚ್ಚ ಗನ್ನಡ ನುಡಿ ಕೋಶ” ವಿದ್ವಾನ್‌ ಕೊಳಂಬೆ ಪುಟ್ಟಣ್ಣ ಗೌಡ ಅವರ ಭಾಷಾ ಸಾಹಿತ್ಯದ ಕೃತಿಯಾಗಿದೆ. ಈ ಪುಸ್ತಕವು ಕನ್ನಡದ ಶಬ್ದಕೋಶಗಳಿಂದ ಕೂಡಿದ್ದು, ಇಲ್ಲಿ ಅಪೂರ್ವ ಪದ ಪ್ರಯೋಗಗಳಿವೆ, ನೂತನ ಶಬ್ದ ಸೃಷ್ಟಿಯಿದೆ. ಕನ್ನಡದ ಮೇಲಿನ ಹೆಚ್ಚಿನ ಒಲವುಳ್ಳ ಇವರ ಗದ್ಯ ಬರಹಗಳಲ್ಲಿಯೂ ಅಚ್ಚಗನ್ನಡದ ಅಚ್ಚೊತ್ತಿದೆ. ಕನ್ನಡವು ಆಳವುಳ್ಳ ಭಾಷೆ, ಸರಳವೂ ಸ್ವತಂತ್ರವೂ ಆದ ನುಡಿ, ಸಾವಿರ ವರ್ಷಗಳ ಹಿಂದಿನಿಂದ ಬಾಳಿದ ನುಡಿ, ಇಂದಿಗೂ ಬೆಳೆಯುತ್ತಿರುವ ನುಡಿಗಳನ್ನು ಇಲ್ಲಿ ಕಾಣಬಹುದು.  ಕನ್ನಡದ ಹೊನ್ನಿನಂತಹ ನುಡಿಗಳನ್ನು ನಾವು ಹೆಚ್ಚಾಗಿ ಬಳಸದೆ ಅವು ಒಂದೊಂದಾಗಿ ಕಣ್ಮರೆಯಾಗುತ್ತಿವೆ. ನಮ್ಮ ನುಡಿಗಳನ್ನು ಆಯ್ದು ಬಳಸಬೇಕು. ಸಾಲದೆಡೆ ಪರರಿಂದ ಸಾಲ ತರಬೇಕು. ಈ ನಿಟ್ಟಿನಲ್ಲಿ ವಿದ್ವಾನ್‌ ಕೊಳಂಬೆ ಪುಟ್ಟಣ್ಣ ಗೌಡ ಅವರು ಅರ್ಥಪೂರ್ಣವಾದ “ಅಚ್ಚ ಗನ್ನಡ ನುಡಿ ಕೋಶ”ವನ್ನು ರಚಿಸಿದ್ದಾರೆ.

About the Author

ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡರು
(15 July 1903)

ವಿದ್ವಾನ್‌ ಕೊಳಂಬೆ ಪುಟ್ಟಣ್ಣ ಗೌಡರು ಮೂಲತಃ ಸುಳ್ಯ ತಾಲ್ಲೂಕಿನ ಚೊಕ್ಕಾಡಿಯವರು. 1903ರ ಜುಲೈ 15ರಂದು ಇವರು ಜನಿಸಿದರು. ತಂದೆ ಸುಬ್ರಾಯಗೌಡ. ತಾಯಿ ಸುಬ್ಬಮ್ಮ. ಸುಳ್ಯದ ಬಳಿಯ ಅಮರ ಪಡ್ನೂರು ಗ್ರಾಮದ ಅಜ್ಜನಗದ್ದೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಪುಟ್ಟಣ್ಣ ಗೌಡರಿಗೆ ಶಿಕ್ಷಕರಾಗಿ ದೊರೆತವರು ಮೇರ್ಕಜೆ ಪುಟ್ಟಣ್ಣನವರು. ಪುಟ್ಟಣ್ಣ ಗೌಡರು 1924ರಲ್ಲಿ ಅಧ್ಯಾಪಕರ ತರಬೇತಿ ಪಡೆದು, ತಾವು ಓದಿದ ಅಜ್ಜನಗದ್ದೆ ಶಾಲೆಯಲ್ಲೇ ಅಧ್ಯಾಪಕರಾಗಿ ಸೇರಿ, ವಿದ್ವಾನ್ ಪರೀಕ್ಷೆಯಲ್ಲಿ ಪಾಸಾದ ನಂತರ ಮುಖ್ಯೋಪಾಧ್ಯಾಯರಾಗಿ ಭಡ್ತಿ ಪಡೆದರು. ನಂತರ ಪಂಜ, ಕೋಟಿಮುಂಡುಗಾರು, ಬೊಬ್ಬೆರೇರಿ, ಮಾಣಿ, ಪುತ್ತೂರು, ಉಪ್ಪಿನಂಗಡಿ ಮುಂತಾದೆಡೆಯಲ್ಲೆಲ್ಲಾ ಕಾರ್ಯ ನಿರ್ವಹಿಸಿ 1958ರಲ್ಲಿ ಸುಳ್ಯದ ಬೋರ್ಡ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ...

READ MORE

Related Books