ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಪ್ರದೇಶದಲ್ಲಿ ಸೂಫಿ ಪರಂಪರೆ ಅತೀ ವೇಗವಾಗಿ ಬೆಳೆದು ಬಂದಿದೆ. ಇವರು ಧಾರ್ಮಿಕ ಮುಖಂಡರಲ್ಲ. ದೇವರ ವಾರಸುದಾರರೂ ಅಲ್ಲ. ಪರಸ್ಪರ ಬಡಿದಾಡದೇ ಮಾನವೀಯತೆ ಮೆರೆದರೆ ಆ ನಡತೆಯು ದೇವರಿಗೆ ಇಷ್ಟವಾಗುತ್ತದೆ ಎಂದು ಪ್ರಸಾರ-ಪ್ರಚಾರ ಮಾಡಿದವರು. ದೇವರ ಹೆಸರಿನಲ್ಲಿ ನಡೆಯುವ ಎಲ್ಲ ಆಡಂಬರ-ಢಂಬಾಚಾರಗಳನ್ನು ತಿರಸ್ಕರಿಸಿದವರು. ಅದರಲ್ಲೂ ಮಹಿಳೆಯರು ಹೊರ ಬಂದು ಸ್ಥಾಪಿತ ಸಮಾಜದ ವಿರುದ್ಧ ಗುಡುಗಿದ್ದು ವಿಶೇಷವೇ ಸರಿ. ಇಂತಹ ಮಹಿಳಾ ಸೂಫಿಗಳ ಬಗ್ಗೆ ಈ ಕೃತಿ ಪರಿಚಯ ಮಾಡಿಕೊಡುತ್ತದೆ. ಈ ಕೃತಿಗೆ ಶಿವಮೊಗ್ಗದ ಕರ್ನಾಟಕ ಸಂಘದ ‘ಪಿ.ಲಂಕೇಶ್ ಪ್ರಶಸ್ತಿ’(2010) ಲಭಿಸಿದೆ.
©2024 Book Brahma Private Limited.