ಸಂವಾದ ಅನುವಾದ

Author : ವಿರೂಪಾಕ್ಷ ಕುಲಕರ್ಣಿ

Pages 464

₹ 480.00




Year of Publication: 2022
Published by: ಸಾಹಿತ್ಯ ಭಂಡಾರ
Address: # ಮಳಿಗೆ ಸಂಖ್ಯೆ: 8, ಜೆಎಂ ಲಿಂಕ್, ಬಳೇಪೇಟೆ, ಕಾಟನ್ ಪೇಟೆ, ಬೆಂಗಳೂರು-560053
Phone: 0802287 7618

Synopsys

ಮರಾಠಿಯ ಖ್ಯಾತ ಲೇಖಕಿ ಉಮಾ ಕುಲಕರ್ಣಿ ಅವರ ಆತ್ಮ ಕಥನ-ಸಂವಾದ, ಅನುವಾದ. ಈ ಕೃತಿಯನ್ನು ಲೇಖಕ ವಿರೂಪಾಕ್ಷ ಕುಲಕರ್ಣಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಉಮಾ ಕುಲಕರ್ಣಿ ಅವರು ಕನ್ನಡ ಹಾಗೂ ಮರಾಠಿ ಭಾಷೆಯ ಸಾಹಿತ್ಯವನ್ನು ಅನುವಾದದ ಮೂಲಕ ಎರಡೂ ಭಾಷೆಯಲ್ಲಿ ಕೃಷಿ ಕೈಗೊಂಡಿದ್ದಾರೆ. ಭೈರಪ್ಪನವರ ಸಾಹಿತ್ಯ: ಮರಾಠಿ ವಿಮರ್ಶೆ ಎಂಬ ಕೃತಿಯು ಕನ್ನಡಿಗ ಕಾದಂಬರಿಕಾರರೊಬ್ಬರ ಸಾಹಿತ್ಯವನ್ನು ಮರಾಠಿ ಭಾಷಿಗ ಸಾಹಿತಿಗಳು ಹೇಗೆ ಹಾಗೂ ಯಾವ ಅಂಶಗಳ ಹಿನ್ನೆಲೆಯಲ್ಲಿ ಸ್ವೀಕರಿಸಿದ್ದಾರೆ ಎಂಬುದರ ಒಳನೋಟ ನೀಡುವ ಈ ಕೃತಿಯು ಪ್ರಸಿದ್ಧವಾಗಿದೆ. ಎರಡು ಭಾಷೆಯ ಸಾಮರಸ್ಯ -ಇತಿಹಾಸ ಕಟ್ಟಿಕೊಡುವತ್ತಲೂ ಉಮಾ ಕುಲಕರ್ಣಿ ಅವರು ಶ್ರಮಿಸಿದ್ದಾರೆ. ಹೀಗಾಗಿ, ಕನ್ನಡಕ್ಕೆ ಬಂದ ಈ ಕೃತಿಯು ಭಾಷಾ ಸಾಮಸರ್‍ಯದ ದೃಷ್ಟಿಯಿಂದ ಬಹುಮುಖ್ಯವಾಗುತ್ತದೆ.

About the Author

ವಿರೂಪಾಕ್ಷ ಕುಲಕರ್ಣಿ

ವಿರೂಪಾಕ್ಷ ಕುಲಕರ್ಣಿ ಅವರ ಊರು ಬೆಳಗಾವಿ. 1962ರಿಂದ ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ. ಮೊದಲಿನ ಒಂದೆರಡು ವರ್ಷ ಮುಂಬಯಿಯ ಬಿ. ಈ.ಎಸ್.ಟಿ.ಯಲ್ಲಿ ತರುವಾಯ ಇಂದಿನವರೆಗೆ ಪುಣೆಯ ಭಾರತ ಸರಕಾರದ ಹಾಯ್ ಎಕ್ಸ್ ಪ್ಲೋ ಸಿವ್ಹ ಕಾರಖಾನೆಯಲ್ಲಿ ಇನ್ ಸ್ಟ್ರೂಮೆಂಟ್ ಇಂಜಿನೀಯರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಸಾಹಿತ್ಯ, ಸಂಗೀತಗಳಲ್ಲಿ ಆಸಕ್ತಿ ಹೊಂದಿರುವ ಅವರು ಕನ್ನಡ ನಾಡು-ನುಡಿಗಳನ್ನು ಕುರಿತು ಮರಾಠಿಯ ಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಅವ್ಯಾಹತ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಅನುವಾದದಲ್ಲಿಯೂ ತೊಡಗಿಕೊಂಡಿರುವ ಅವರು ಕನ್ನಡ ಹಾಗೂ ಮರಾಠಿ ಭಾಷೆಯ ಬಾಂಧವ್ಯ ಬೆಸೆಯುವಂತಹ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books