`ಮರಣ ಪರಲೋಕ ಪುನರ್ಜನ್ಮ’ ಕೃತಿಯು ವಿ.ಎಂ ಉಪಾಧ್ಯಾಯ ಅವರ ಶಾಸ್ತ್ರಗ್ರಂಥ ಕೃತಿಯಾಗಿದೆ. ಅಶರೀರತ್ನವೇ ಮೋಕ್ಷವು, ಜಿಜ್ಞಾಸುಗಳು ಆತ್ಮಜ್ಞಾನವನ್ನು ಹೊಂದಬೇಕಾದರೆ ಈಗಾಗಲೇ ಇರುವ ಶರೀರವೇ ತಾನು ಎಂಬ ಜ್ಞಾನವನ್ನು ತ್ಯಜಿಸಬೇಕಾಗುವುದು. ಶರೀರವಿರುವುದರಿಂದಲೇ ಮರಣಭಯವು ಇರುವುದು. ಮರಣಭಯಕ್ಕಿಂತ ಮಿಕ್ಕಿದ ಭಯವಿಲ್ಲ ಮರಣಭಯದಿಂದ ಪಾರಾಗಲು ಇರುವ ಮಾರ್ಗವೆಂದರ ಮರಣ ಎಂದರೇನು? ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಪರಲೋಕಗಳು ಇಲ್ಲ ಎಂದು ವಾದಿಸುವವರ ವಾದಗಳನ್ನು ವಿವರಿಸಿ ನಂತರ ಆ ವಾದಗಳನ್ನು ಖಂಡಿಸಿ ಪರಲೋಕಗಳಿವೆ ಎಂದು ಶಾಸ್ತ್ರಾನುಸಾರವಾಗಿ ಪ್ರತಿಪಾದಿಸಲಾಗಿದೆ. ಹಾಗೆಯೇ, ಪುನರ್ಜನ್ಮವಿಲ್ಲ ಎನ್ನುವವರ ವಾದಗಳನ್ನು ವಿವರಿಸಿ ಆ ವಾದಗಳನ್ನು ಶಾಸ್ರೋಕ್ತ ಕ್ರಮದಲ್ಲಿ ಖಂಡಿಸಿ ಪುನರ್ಜನ್ಮಗಳಿವೆ ಎಂದು ವಿವರಿಸಲಾಗಿದೆ.
©2024 Book Brahma Private Limited.