‘ಅದ್ವೈತಾನುಸಂಧಾನ’ ಕೃತಿಯು ವಿ.ಎಂ. ಉಪಾಧ್ಯಾಯ ಅವರ ಶಾಸ್ತ್ರಗ್ರಂಥ ಕೃತಿಯಾಗಿದೆ. ‘ದೇವರು’ ಶಬ್ಧವನ್ನು ವೇದ ಮತ್ತು ದರ್ಶನ ಶಾಸ್ತ್ರಗಳಲ್ಲಿ ಹೇಗೆ ಅರ್ಥೈಸಿದ್ದಾರೆ? ದೈತ ಮತ್ತು ಅದೈತ ಸಿದ್ದಾಂತಗಳಲ್ಲಿ ಭಕ್ತಿ ಶಬ್ದದ ಅರ್ಥಗಳಲ್ಲಿ ವ್ಯತ್ಯಾಸವಿದೆ. ಶ್ರವಣ-ಮನನ-ನಿದಿಧ್ಯಾಸಗಳ ಅಗತ್ಯ ಮತ್ತು ಸ್ವಾಧ್ಯಾಯದ ಕ್ರಮ ಅವಸ್ಮಾ ತ್ರಿಪುಟಿಯನ್ನು ಪರಾಮರ್ಶಿಸುವ ಮೂಲಕ ಅನುಭವಾನುಸಾರಿಯಾದ ಶ್ರುತಿ ಪ್ರಮಾಣದ ಅರ್ಥವನ್ನು ಗ್ರಹಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಜಗತ್ತು ಎಂದರೇನು? ಆತ್ಮನ ವರ್ತಮಾನ ಅರ್ಥಾತ್ ಆತ್ಮನಿಗೆ ಭೂತ-ಭವಿಷ್ಯಗಳಿಲ್ಲ. ಆತ್ಮನು ಸದಾ ವರ್ತಮಾನನೇ ಆಗಿದ್ದಾನೆ. ಅದೈತ ಸಿದ್ಧಾಂತದಲ್ಲಿ ಪದೇಪದೆ ಉಪಯೋಗಿಸಲ್ಪಡುವ ಶಬ್ದ "ಮಾಯಾ ದ ಅರ್ಥವಿವರಣೆ , ನಾನು ಅಥವಾ ಜೀವನು ಆತ್ಮನೇ ಆಗಿದ್ದಾನೆ ಎಂದು ಕಂಡುಕೊಳ್ಳುವ ಉಪಾಯ ನಾನು ಬ್ರಹ್ಮನೇ ಎಂಬ ತತ್ತ್ವದ ಅನುಸಂಧಾನದ ಮಾರ್ಗ ಎಂದು ಇಲ್ಲಿ ವಿವರಿಸಲಾಗಿದೆ.
©2024 Book Brahma Private Limited.