ಸರ್. ವಿಶ್ವೇಶ್ವರಯ್ಯ ಅವರ ನೂರನೇ ವರ್ಧಂತಿ ಅಂಗವಾಗಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸಂಪಾದಿಸಿದ ಕೃತಿ . ವಿವಿಧ ಲೇಖಕರು ಬರೆದ ಲೇಖನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಮೊದಲು ಎ.ಎನ್. ಮೂರ್ತಿರಾವ್ ಅವರು ಭಾರತ ಸರ್ಕಾರದ ಯೋಜನಾ ಪತ್ರಿಕೆಗೆ ಆಂಗ್ಲ ಭಾಷೆಯಲ್ಲಿ ಈ ಕುರಿತು ಲೇಖನ ಬರೆದಿದ್ದು, ಅದನ್ನು ಕನ್ನಡದಲ್ಲೂ ಬರೆದುಕೊಟ್ಟಿದ್ದನ್ನೂ ಪ್ರಕಟಿಸಲಾಗಿದೆ. ಈ ಗ್ರಂಥದ ಬಹುಭಾಗವು ಜೀವನ ಪತ್ರಿಕೆಯ 1951ರ ಆಗಸ್ಟ್ ನಲ್ಲಿ ಪ್ರಕಟಿತ ’ಶ್ರೀ ವಿಶ್ವೇಶ್ವರಯ್ಯ’ ಎಂಬ ವಿಶಿಷ್ಟ ಸಂಕೆಯಲ್ಲಿ ಪ್ರಕಟಗೊಂಡ ಲೇಖನಗಳಿವೆ ಎಂದು ಕೃತಿಯ ಸಂಪಾದಕ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಉಲ್ಲೇಖಿಸಿದ್ದಾರೆ..ಎಂ.ವಿಶ್ವೇಶ್ವರಯ್ಯ ಅವರ ಬದುಕು-ವೃತ್ತಿ ಘನತೆ-ಸಾಧನೆ-ಮಾನವೀಯ ಮುಖ ಇತ್ಯಾದಿ ಕುರಿತು ತುಂಬಾ ವಿಸ್ತೃತವಾಗಿ ಬರೆದಿರುವ ಲೇಖನಗಳ ಕೃತಿ ಇದು.
©2024 Book Brahma Private Limited.