ಕಾರಂತ ಯುಗಾಂತ

Author : ಜಯಪ್ರಕಾಶ ಮಾವಿನಕುಳಿ

Pages 368

₹ 180.00




Year of Publication: 1999
Published by: ಶಿವರಾಮ ಕಾರಂತ ಅಧ್ಯಯನ ಕೇಂದ್ರ
Address: ವಿವೇಕಾನಂದ ಕಾಲೇಜು, ಪುತ್ತೂರು-574203

Synopsys

’ಕಾರಂತ ಯುಗಾಂತ’ ಜಯಪ್ರಕಾಶ್ ಮಾವಿನಕುಳಿ ಅವರ ಸಂಪಾದಿತ ಬರವಣಿಗೆಗಳ ಹಾಗೂ ಸಂಪಾದಕೀಯ ಬರವಣಿಗೆಯ ಕೃತಿಯಾಗಿದೆ. ಕಾರಂತರ ವ್ಯಕ್ತಿತ್ವವನ್ನು ಭಿನ್ನ ರೀತಿಯಲ್ಲಿ ಬಿಂಬಿಸಿ, ತಾವು ಕಂಡಂತಹ ಅದ್ಭುತ ವ್ಯಕ್ತಿತ್ವವನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಎ.ಎನ್. ಮೂರ್ತಿರಾವ್ ಅವರು, ‘ಸಮಾಜವನ್ನು ವಿವಿಧ ಚಿತ್ರಣಗಳಿಂದ ಕಟ್ಟಿಕೊಟ್ಟು, ಕಾಣುವ ಸಣ್ಣತನ, ಕೇಡಿತನ, ಕ್ರೌರ್ಯ, ರಾಜಕೀಯದಲ್ಲಿ ಸೇರಿರುವ ವಂಚನೆ, ಅಧಿಕಾರದಾಹ, ಪ್ರತಿಷ್ಠಾ ಪೂಜೆ, ಇತ್ಯಾದಿ ಮೇಲೆ ತೀಕ್ಷ್ಣವಾದ  ಅಸ್ತ್ರಗಳನ್ನು ಪ್ರಯೋಗಿಸುವ ಕಾರಂತರನ್ನು ಬಲ್ಲೆ. ಜೊತೆಗೆ ವಿಶಾಲ ಅನುಭವದಿಂದ ಹೃದಯವನ್ನು ಪಕ್ವವಾಗಿಸಿಕೊಂಡು ’ ಇವರದ್ದು ಹೆಂಗರಳು’ ಎನ್ನಿಸುವ ,ಮಟ್ಟಿಗೆ ಮಾರ್ದವವನ್ನು ಬೆಳೆಸಿಕೊಂಡಿರುವ ಕಾರಂತರ ನೋಟ ಇಲ್ಲಿದೆ. ಮೊದಲನೇಯ ಕಾರಂತರು ನಮ್ಮನ್ನು ಚಾವಟಿಯಿಂದ ಹೊಡೆದು ಎಚ್ಚರಿಸುತ್ತಾರೆ. ಎರಡನೇಯವರು ನಮ್ಮನ್ನು ನೋಡಿ ಅರ್ಥಮಾಡಿಕೊಂಡು ಮರುಗಿ, ಕಣ್ಣೀರನ್ನು ತಡೆದುಕೊಳ್ಳುತ್ತಾರೆ. ಈ ಎಲ್ಲಾ ಸ್ವಭಾವಗಳು ಒಬ್ಬರಲ್ಲೇ ಇರುವುದು ಅಸಾಧ್ಯ. ಆದರೆ ಕಾರಂತರಲ್ಲಿ ಅವೆರಡೂ ಒಟ್ಟುಗೂಡಿರುವುದು ಆಶ್ಚರ್ಯವೇನಲ್ಲ. ಅವರ ಜೀವನಾನುಭವ ವ್ಯಾಪ್ತಿಯನ್ನು ಗಮನಿಸಿದರೆ, ಬಹುಶಃ ನಮ್ಮಲ್ಲಿ ಬೇರೆ ಯಾವ ಬರಹಗಾರರಿಗೆ ಇವರಷ್ಟು, ವಿಶಾಲವಾದ ಅನುಭವಕ್ಷೇತ್ರವಾಗಲಿ, ಕಾರ್ಯ ಕ್ಷೇತ್ರವಾಗಲಿ ಇಲ್ಲ ಎಂಬುದು ನಿಶ್ಚಿತ. ಅವರ ಪ್ರತಿಭೆ ದೈವದತ್ತವಾದದ್ದು: ಅನುಭವ ಪ್ರಯತ್ನಪೂರ್ವಕವಾಗಿ ಪಡೆದುಕೊಂಡಿದ್ದು, ಈ ಅನುಭವವೇ ಅವರ ಸಾಹಿತ್ಯದ ಬೆನ್ನೆಲುಬಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಕೃತಿಯಲ್ಲಿ ನಾಲ್ಕು ಭಾಗಗಳಾಗಿದ್ದು ಮೊದಲನೇ ಭಾಗವು ಸಂಪಾದಕೀಯವಾಗಿ ಮಾರ್ಪಟ್ಟಿದ್ದರೆ, ಇನ್ನೊಂದು ಭಾಗವು, ಸ್ಮರಣ ಲೇಖನಗಳಿಂದ ತುಂಬಿದೆ. ಮೂರನೇ ಭಾಗದಲ್ಲಿ ಇಂಗ್ಲಿಷ್ ಸ್ಮರಣ ಲೇಖನಗಳು ಹಾಗೂ ನಾಲ್ಕನೇ ಭಾಗವು ವಿಶೇಷ ಲೇಖನಗಳಿಂದ ಕೂಡಿದೆ. ಮೊದಲನೇ ಭಾಗದ ಸಂಪಾದಕೀಯಗಳು: ಶಕಪುರುಷ ಶಿವರಾಮ ಕಾರಂತ(ಪ್ರಜಾವಾಣಿ), ಅಸ್ತಂಗತವಾದ ಬೆಳ್ಳಿ ನಕ್ಷತ್ರ (ಉದಯವಾಣಿ), ಕಾರಂತ ಯುಗದ ಅಂತ್ಯ - ಕನ್ನಡ ಜನಾಂತರಂಗ, ಮೇರುಸದೃಶ ವ್ಯಕ್ತಿತ್ವದ ಕಣ್ಮರೆ (ಹೊಸದಿಗಂತ), ಆ ಕಾರಂತರು ಇನ್ನಿಲ್ಲ (ಸಂಯುಕ್ತ ಕರ್ನಾಟಕ), ಅಪೂರ್ವ, ಆತ್ಮೀಯ ಬಾಂಧವ (ತರಂಗ) ಕಣ್ಮರೆಯಾದ ಕಡಲ ತೀರದ ಭಾರ್ಗವ (ಕರ್ಮವೀರ) ಮರಳಿ ಮಣ್ಣಿಗೆ' ಶಿವರಾಮ ಕಾರಂತರು (ಮಂಗಳ) ಕಾರಂತ ಕಿರಣ (ಮಯೂರ) ಸಹೃದಯತೆ ಮತ್ತು ಸಾಹಿತ್ಯಾರಾಧನೆ (ಲಂಕೇಶ್ ಪತ್ರಿಕೆ), ಹುಡುಕಾಟದ ಹರಿಕಾರ ಇನ್ನಿಲ್ಲವೆ? (ವಿಕ್ರಮ), ಸಮಷ್ಟಿ ಬದುಕಿನ ಪ್ರಬುದ್ಧ ಚಿಂತಕ (ಅರಗಿಣಿ) ನಮಸ್ಕಾರ (ತುಷಾರ) 'ನಡೆದಾಡುವ ವಿಶ್ವಕೋಶ ಡಾ. ಶಿವರಾಮ ಕಾರಂತ ಇನ್ನಿಲ್ಲ (ಜ್ವಾಲಾಮುಖಿ) ಮಹಾನಿರ್ಗಮನ (ಮಂಜುವಾಣಿ) ಕಡಲ ತೀರದ ಭಾರ್ಗವನಿಗೆ ಶತಕೋಟಿ ನಮನ - ಸ್ನೇಹ ಸಂಬಂಧ, ಶ್ರದ್ಧಾಂಜಲಿ – ಮಲ್ಲಿಗೆ, ಅಗಲಿದ ಕಾರಂತರು – ಹವ್ಯಕ, ಫರಿಯಾದ್ - ವಿನೂತನ (ಹೊಸ ಬದುಕು ಮಾಸಪತ್ರಿಕೆ), ಹೆಂಗರುಳಿನ ಮಹಾ ಮಾನವತಾವಾದಿ (ನಿಸರ್ಗ ಲೋಕ). ಎರಡನೇ ಭಾಗದಲ್ಲಿನ ವಿಶೇಷ ಲೇಖನಗಳು: ಯುಗಪುರುಷನಿಗೆ ಪ್ರೀತಿಯ ಗೌರವದ ನಮನ (ಪ್ರೊ. ಎಲ್. ಎಸ್. ಶೇಷಗಿರಿ ರಾವ್ )- ಹೃದಯವಂತ, ಸಾಮಾಜಿಕ ಚಿಂತಕ ಶಿವರಾಮ ಕಾರಂತ-(ಶ್ರೀನಿವಾಸ ಹಾವನೂರ) ಶಿವರಾಮ ಕಾರಂತ : ನೆನಪು ನಿರಂತರ (ಪ್ರೊ. ಜಿ. ವೆಂಕಟಸುಬ್ಬಯ್ಯ )ಅಳಿದ ಮೇಲೂ ಉಳಿದ ಧೀಮಂತ (ಪ್ರೊ. ಎಚ್ಚೆಸ್ಕೆ) ಕಾರಂತರೆಂಬ ಕಾರಂಜಿ (ಪಿ. ಲಂಕೇಶ್) ಶಿವರಾಮ ಕಾರಂತರ ಎರಡು ಮುಖ (ಬಿ. ವಿ. ವೈಕುಂಠರಾಜು) ಶಿವರಾಮ ಕಾರಂತ : ಅಳಿದ ಮೇಲೆ ಉಳಿದ ನೆನಪು ( ಜಿ. ಎಚ್. ನಾಯಕ) ಸಮೀಪದಿಂದ ಕಂಡಂತೆ ಕಾರಂತರು (ಬಿ. ಮಾಲಿನಿ ಮಲ್ಯ), ನಮ್ಮ ಮನೆಗೆ ಬಂದಿದ್ದ ಸಿಂಹ ಪಾಲು (ವೈದೇಹಿ), ವಿರಮಿಸಲು ಸಾಗಬೇಕಿದೆ ಬಲುದೂರ (ಈಶ್ವರಯ್ಯ), ಹಿಂಡನಗಲಿದ ಪುಂಡು ಸಲಗ (ನಟರಾಜ್ ಹುಳಿಯಾರ್), ಮೊದ್ದು ಕೋರ್ಟಿಗೆಳೆಯಿರಿ, ಪಂಚಾತಿಕೆ ಎಲ್ಲ ಮತ್ತೆ( ರವೀಂದ್ರನಾಥ ಶಾನುಭಾಗ್), ಎಂದೂ ಬತ್ತದ, ಸದಾ ಉಕ್ಕುತ್ತಿರುವ ಸಾಗರ (ಬೆ. ಸು. ನಾ. ಮಲ್ಯ), ಹೀಗೊಂದು ನೆನಪು(ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ) ನಮ್ಮ ಕಾರಂತರು (ಡಾ. ಜಿ. ಭಾಸ್ಕರ ಮಯ್ಯ), ಒಂದು ನೆನಪು( ಡಾ. ಬಿ. ಎಸ್. ಸ್ವಾಮಿ), ಇಪ್ಪತ್ತೊಂದನೇ ಶತಮಾನದ ಅಜ್ಜಿಕತೆ (ಕೋ. ಶಿವಾನಂದ ಕಾರಂತ ),ಕಳಚಿತು ಕಡೆಯ ಕೊಂಡಿ, ಕಡಲ ತೀರದ ಭಾರ್ಗವರಿಗೆ ಶ್ರದ್ದಾಂಜಲಿ(ಬಿ. ಎಂ. ಮಾಣಿಯಾಟ್), ಕಾರಂತರು ಕಂಡದ್ದು(ಈಶ್ವರ ದೈತೋಟ), “ತೆಗೀರಿ ತೆಗೀರಿ ಈ ಫೋಟೋ ಬೇಕಾದ್ರೂ ಬೇಕಾಗಬಹುದು( ದೀಪಕ್ ಸಾಗರ್), ಮನದಂಗಳದಲ್ಲಿ ನೆನಪುಗಳ ಮೆರವಣಿಗೆ( ಚೈತ್ರ), ಕಣ್ಮರೆಯಾದ 'ಕಡಲ ತೀರದ ಭಾರ್ಗವ (ಮುಕ್ಕಣ್ಣ ಕರಿಗಾರ), ಕಾರಂತ 'ಯಕ್ಷರಂಗ’ (ಗುರುರಾಜ ಮಾರ್ಪಳ್ಳಿ),.ಕಾರಂತರು ಹಾಗೂ ಸಿನಿಮಾ(ಪೃಥ್ವಿ), ಕಾರಂತರು ಹಳೆಯಂಗಡಿಗೆ ಬಂದಾಗ( ಕೆ.ಸದಾಶಿವ ಹಳೆಯಂಗಡಿ), ಈ ಶತಮಾನದ ಪ್ರಮುಖ ಚಿಂತಕ( ವ್ಯಾಸರಾಯ ಬಲ್ಲಾಳ), ಶಿವರಾಮ ಕಾರಂತರ ಸಂಧ್ಯಾ ವಿಹಾರಧಾಮಗಳು( ಬಿ. ಮಾಲಿನಿ ಮಲ್ಯ), ಕಾರಂತರ ವೈಚಾರಿಕತೆ (ಹಯವದನ ಉಪಾಧ್ಯ), ಜ್ಞಾನಪೀಠ ಪ್ರಶಸ್ತಿ ಪಡೆದ 'ಮೂಕಜ್ಜಿಯ ಕನಸುಗಳು'(ಎ. ಜಿ. ಶಿವಕುಮಾರ್), ಅಳಿದ ಮೇಲೆ (ಯಶವಂತ ) ಕಾರಂತ (ಅಹಿತಾನಲ), ಕಾರಂತರೊಂದಿಗೆ ಒಂದು ಕ್ಷಣ(ಸೌಕೂರು ಸುಬ್ರಹ್ಮಣ್ಯ ಅಡಿಗ), ಅವರ ಕೆನ್ನೆಗೆ ಹೊಡೆದು 'ವಾಹ್ವ್ವಾ ' ಅನ್ನಿಸಿಕೊಂಡೆ (ಡಾ. ಕಬ್ಬಿನಾಲೆ ವಸಂತ ಭಾರದ್ವಾಜ), ಮೃತ್ಯುಂಜಯ ಸಾಧಕ(ವಿಶ್ವಾಮಿತ್ರ), ಮಗ ಕಂಡ ತಾತ ಕಾರಂತ( ಉಲ್ಲಾಸ ಕಾರಂತ) ಕಾರಂತರ ನೆನಪು (ಕೆ. ತಾರಾನಾಥ ಹೊಳ್ಳ) ,ಕಾರಂತರೊಂದಿಗೆ ಕನ್ನಡೋತ್ಸವ (ಡಾ. ಅನಿಲ ಕಮತಿ), ಕಾರಂತರು ಹಾಗೂ ಉತ್ತರ ಕರ್ನಾಟಕದವರು(ಶ್ರೀನಿವಾಸ ಹಾವನೂರ), ಶಿವರಾಮ ಕಾರಂತರ ಕುರಿತ ಕೆಲವು ನೆನಪುಗಳು(ಆರ್. ಎನ್. ಭಿಡೆ), ಕಾರಂತರಿಲ್ಲದೆ ಕಳೆದುಹೋದದ್ದು (ಸಾವಿತ್ರಿ),ಕಾರಂತರ ಸಂಸ್ಮರಣೆ(ಪ್ರೊ. ವಿನೋದ ಕುಕನೂರ ), ಶತಮಾನಕ್ಕೊಬ್ಬ ಕಾರಂತರು (ಪಿ. ಮಾಧವ ನಾಯಕ್), ನಾನು ಕಂಡ ಈ ಶತಮಾನದ ಅಚ್ಚರಿ( ಡಾ. ಜಯಪ್ರಕಾಶ ಮಾವಿನಕುಳಿ). ಭಾಗ ಮೂರರಲ್ಲಿಯ ಸ್ಮರಣ ಲೇಖನಗಳು (ಇಂಗ್ಲಿಷ್) A REBEL, AN AESTHETE AND A RESPONSIBLE HUMAN BEING(A - S. Sugata), TOWERING LITERARY PERSONALITY (Jyothi Raghuram), THE RIVER THAT WOULD NOT DRY UP (Chaman Ahuja), GIANT OF AN INTELLECTUAL; END OF AN ERA, DR. KARANTH AND GURUDEV TAGORE, HE WAS A COLOSSUS IN OUR CULTURAL AMPHITHEATRE(Jayanth Kodkani), A MANY - SPLENDOURED GENIUS( A Jayaram)THE WORLD ACCORDING TO SHIVARAM KARANTH( Ramachandra Sharma) A MULTI-FACETED PERSONALITY - Indian Express, EX HIS MIND WAS A SEA(Dr. G. S. Amur), GLIMPSES OF A VANISHED LIFE (Alok Rai). ಭಾಗ ನಾಲ್ಕರಲ್ಲಿನ ವಿಶೇಷ ಲೇಖನಗಳು :ಕಡಲ ತೀರದ ಭಾರ್ಗವ(ಜಿ. ಪಿ. ರಾಜರತ್ನಂ), ಸಾಹಿತ್ಯ ಸಮ್ಮೇಳನ: ನನ್ನ ನೆನಪುಗಳು(ಡಾ. ಕೆ. ಶಿವರಾಮ ಕಾರಂತ), ಕಾರಂತರ ಕೊನೆಯ ದಿನಗಳು(ಬಿ. ಮಾಲಿನಿ ಮಲ್ಯ), 100, ಮಹಾಭಿನಿಷ್ಮ( ಐರೋಡಿ ಶಂಕರನಾರಾಯಣ ಹೆಬ್ಬಾರ್). -ಅನುಬಂಧ : ಡಾ. ಶಿವರಾಮ ಕಾರಂತರ ಒಟ್ಟು ಕೃತಿಗಳು, ಅನುಬಂಧ 2: ಕಾರಂತರಿಗೆ ದೊರೆತ ಕೆಲವು ಗೌರವ, ಪ್ರಶಸ್ತಿಗಳು, ಅನುಬಂಧ 3 ಕಾರಂತ - ವ್ಯಕ್ತಿ ಮತ್ತುವ್ಯಕ್ತಿತ್ವ ಕುರಿತು ಪ್ರಕಟವಾದ ಕೃತಿಗಳು, ಅನುಬಂಧ - 4 ಇಲ್ಲಿ ಬಳಸಿಕೊಂಡ ಸಂಪಾದಕೀಯಗಳನ್ನು ಪ್ರಕಟಿಸಿದ ಪತ್ರಿಕೆಗಳು ಮತ್ತು ಲೇಖಕರ ವಿಳಾಸಗಳನ್ನು ಒಳಗೊಂಡಿದೆ..

About the Author

ಜಯಪ್ರಕಾಶ ಮಾವಿನಕುಳಿ
(05 May 1951)

ಸಾಹಿತಿ ಜಯಪ್ರಕಾಶ ಮಾವಿನಕುಳಿ ಅವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯಿಕ ಕೃಷಿಯ ಜೊತೆಗೆ ನಾಟಕಕಾರರಾಗಿ, ರಂಗ ನಿರ್ದೇಶಕರಾಗಿ ಮತ್ತು ರಂಗಭೂಮಿ ಚಲನಚಿತ್ರ ನಟರಾಗಿಯೂ ಖ್ಯಾತಿ ಗಳಿಸಿದ್ದಾರೆ. ಕನ್ನಡ ಸಾಹಿತ್ಯಲೋಕಕ್ಕೆ ಹಲವು ನಾಟಕಗಳು, ಕಾದಂಬರಿ, ಸಣ್ಣಕತೆಗಳು, ಕಾವ್ಯ ಮತ್ತು ಇತರರೊಡನೆ ಹಲವು ಕೃತಿಗಳ ಸಂಪಾದನೆ ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ನೀಡಿದ್ದಾರೆ. 1978ರಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು 4 ಕಥಾ ಸಂಕಲನಗಳು, 4 ಕವನ ಸಂಕಲನಗಳು, 7 ನಾಟಕಗಳು, 12 ಸಂಪಾದಿತ ಕೃತಿಗಳು ಹಾಗೂ ಇತರ ಕೃತಿಗಳೊಂದಿಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 'ಪೊಲಿಟಿಕ್ಸ್ ಆ್ಯಂಡ್ ಕಲ್ಚರ್' ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ...

READ MORE

Related Books