ಹಲವು ಸಂಘಟನೆಗಳು, ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು ಕಲಬುರ್ಗಿ. ಅವರು ರೂಪಿಸಿದ ಯೋಜನೆಗಳು ಕೂಡ ಹಲವು. ಅವರು ಮುನ್ನಡೆಸಿದ ಸರ್ಕಾರಿ ಸಂಸ್ಥೆಗಳಿಗೂ ಲೆಕ್ಕವಿಲ್ಲ. ವಿಜಯಪುರದ ಡಾ.ಫಗು.ಹಳಕಟ್ಟಿ ಸಂಶೋಧನಾ ಕೇಂದ್ರ, ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕನ್ನಡ ವಿಶ್ವವಿದ್ಯಾಲಯ ಹಂಪಿ, ಬಸವ ಸಮಿತಿ ಬೆಂಗಳೂರು, ಬಾಲ್ಕಿ ಹಿರೇಮಠ ಸಂಸ್ಥಾನಮಠ ಹೀಗೆ ನೂರೆಂಟು ಸಂಸ್ಥೆಗಳು ಅವರ ಕೊಡುಗೆಯನ್ನು ಸದಾ ನೆನೆಯುತ್ತಲೇ ಇರುತ್ತವೆ.
ಹಾಗೆ ಅವರು ಸಂಘ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತಿದ್ದನ್ನು ಒಂದೊಂದಾಗಿ ಪಟ್ಟಿ ಮಾಡಿ ಕೃತಿಯಲ್ಲಿ ನೀಡಲಾಗಿದೆ. ಪುಸ್ತಕದ ಲೇಖಕರು ಡಾ. ಎಂ.ಎಸ್. ಮದಭಾವಿ.
©2025 Book Brahma Private Limited.