ಮೈಸೂರಿನ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಕ್ಕಳ ಕೂಟ. ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಿದ ಸಂಸ್ಥೆ ಇದು. ಆ ಮೂಲಕ ನಾಡಿಗೆ ಅದು ಹಲವು ಪ್ರತಿಭೆಗಳನ್ನು ಕಾಣಿಕೆಯಾಗಿ ನೀಡಿದೆ. ಇಂತಹ ಮಹತ್ತರ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು ಆರ್. ಕಲ್ಯಾಣಮ್ಮ. ಅವರೊಟ್ಟಿಗೆ ದುಡಿದವರು ಎಚ್.ವೈ. ಸರಸ್ವತಿ. ಕಲ್ಯಾಣಮ್ಮನವರಿಂದ ಸ್ಫೂರ್ತಿ ಪಡೆದು ಅಂತಹುದೇ ಸಂಸ್ಥೆಯನ್ನು ಮೈಸೂರಿನಲ್ಲಿ ಕಟ್ಟಿಬೆಳೆಸುತ್ತಾರೆ ಅವರು. ಸರಸ್ವತಿ ಅವರ ತಂದೆ ವಾಜಪೇಯಂ ವೆಂಕಟಸುಬ್ಬಯ್ಯನವರು. ಸ್ವಾತಂತ್ಯ್ರ ಹೋರಾಟದ ಚಟುವಟಿಕೆಗಳು ಮನೆಯಲ್ಲಿ ನಡೆಯುತ್ತಿದ್ದ ಸಮಯ. ಜೊತೆಗೆ ಸಂಗೀತ, ಸಾಹಿತ್ಯದ ಸಹವಾಸ. ಅಂತಹ ಚಟುವಟಿಕೆಗಳೇ ಸರಸ್ವತಿಯವರು ಸಮಾಜಸೇವೆಯಲ್ಲಿ ತೊಡಗಿಕೊಳ್ಳಲು ಸಹಕಾರಿಯಾಯಿತು.
ಸರಸ್ವತಿ ಅವರ ಬದುಕನ್ನು ಕುರಿತು ಅವರ ಮಕ್ಕಳು ಮೊಮ್ಮಕ್ಕಳು, ಸೊಸೆಯಂದಿರು ಹಾಗೂ ಬಂಧುಗಳು ಹಂಚಿಕೊಂಡ ಅನುಭವಗಳ ಗುಚ್ಛ ’ಹಲವು ಮಕ್ಕಳ ತಾಯಿ’.
©2025 Book Brahma Private Limited.