ಲೇಖಕರಾದ ನಿಷ್ಠಿ ರುದ್ರಪ್ಪ ಹಾಗೂ ಎಸ್.ಎಸ್. ಪಟ್ಟಣಶೆಟ್ಟಿ ಅವರು ಜಂಟಿಯಾಗಿ ಗದಗಿನ ತೋಂಟದಾರ್ಯ ಮಠದ ಜಗದ್ಗುರು ಶ್ರೀ ತೋಂಟದಾರ್ಯ ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ ಅವರ ಜೀವನ ಸಾಧನೆ ಕುರಿತು ಸಂಪಾದಿಸಿದ ಸಂಸ್ಮರಣಾ ಕೃತಿ-ತೋಂಟದ ಬಸವಣ್ಣ.ಹರಪನಹಳ್ಳಿ ತಾಲ್ಲೂಕಿನ ಶ್ರೀಕೋಲ ಶಾಂತೇಶ್ವರ ಜನಕಲ್ಯಾಣ ಕೇಂದ್ರ ಅರಿಸೀಕೆರೆ ಪ್ರಕಟಗೊಂಡಿದೆ. ಈ ಸಂಸ್ಮರಣಾ ಗ್ರಂಥವು 47 ಜನ ವಿದ್ವಾಂಸರ ಮತ್ತು ಜನ ಸಾಮಾನ್ಯರು ಸ್ವಾಮೀಜಿಗಳ ಒಡನಾಟವನ್ನು ಸ್ಮರಿಸಿದ ಲೇಖನಗಳನ್ನು ಹಾಗೂ ಸ್ವಾಮೀಜಿಯವರ ಕುರಿತು 16 ಜನ ಕವಿಗಳು ಬರೆದ ಕವನಗಳನ್ನು ಒಳಗೊಂಡ ಬೃಹತ್ ಗ್ರಂಥವಿದು. ತೋಂಟದ ಸಿದ್ಧಲಿಂಗೇಶ್ವರರನ್ನು ಬಸವಣ್ಣನೆಂದು ಕರೆಯಲಾಗುತ್ತದೆ. ಅದೇ ರೀತಿ, ಗದುಗಿನ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರನ್ನು ‘ತೋಂಟದ ಬಸವಣ್ಣ’ನೆಂದು ಕರೆಯಲಾಗುತ್ತಿತ್ತು. ಅದಕ್ಕಾಗಿಯೇ ಈ ಕೃತಿಗೆ ‘ತೋಂಟದ ಬಸವಣ್ಣ’ ಎಂಬ ಶೀರ್ಷಿಕೆ ನೀಡಲಾಗಿದೆ.
©2025 Book Brahma Private Limited.