ದೇಶ ಕಂಡ ಪ್ರಾಮಾಣಿಕ ಪತ್ರಕರ್ತ ರಾಘವನ್ ಅವರ ಸಂಸ್ಮರಣ ಗ್ರಂಥ ’ಸಂಪಾದಕರ ಸಂಪಾದಕ’. ರಾಘವನ್ ಅವರ ಇಡೀ ಪತ್ರಿಕಾ ಜೀವನವನ್ನು ರೂಪಿಸಿದ್ದ ಎರಡು ಅಂಶಗಳೆಂದರೆ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆ. ಪತ್ರಿಕೆಯೊಂದು ಯಶಸ್ಸು ಕಾಣಬೇಕೆಂದರೆ, ಓದುಗರನ್ನು ಆಕರ್ಷಿಸಬೇಕೆಂದರೆ ವೈವಿಧ್ಯಮಯ ಆಸಕ್ತಿಗಳ ಬಹುಮುಖ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕೆಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಕೆಲವೇ ಕೆಲವು ಸಂಪಾದಕರುಗಳಲ್ಲಿ ರಾಘವನ್ ಕೂಡ ಒಬ್ಬರಾಗಿದ್ದರು. ಇಂಗ್ಲಿಷ್ ಪತ್ರಿಕಾರಂಗದಲ್ಲಿ ದೀರ್ಘಕಾಲ ವೈಶಿಷ್ಟ್ಯಪೂರ್ಣವಾಗಿ ದುಡಿದ ಅವರು, ’ವಿಜಯ ಕರ್ನಾಟಕ’ಕ್ಕೂ, ಕನ್ನಡ ಪತ್ರಿಕಾರಂಗಕ್ಕೂ ಆಕಸ್ಮಿಕವಾಗಿ ಬಂದವರು.
ಆದರೆ ತಾವಿದ್ದ ಅತ್ಯಲ್ಪ ಕಾಲದಲ್ಲೇ ಕನ್ನಡ ಪತ್ರಿಕಾರಂಗದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿ, ತಾವು ಸಂಪಾದಕರಾಗಿದ್ದ ಪತ್ರಿಕೆಗೆ ಹೊಸತನವನ್ನೂ, ಇದರ ಹಿಂದೆ ದುಡಿಯುತ್ತಿದ್ದ ಪತ್ರಕರ್ತರ ತಂಡಕ್ಕೆ ವೃತ್ತಿಪರತೆಯನ್ನೂ ತಂದವರು ರಾಘವನ್.
ಈ ಕೃತಿಯಲ್ಲಿ ರಾಘವನ್ ಅವರ ಒಡನಾಟ, ಹಾಗೂ ಅವರ ಜೊತೆ ಕೆಲಸಮಾಡಿದ ಅನುಭವದ ಬಗ್ಗೆ ಹಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪತ್ರಕರ್ತರಾದ ಕೆ. ಕರಿಸ್ವಾಮಿ ಮತ್ತು ಬಿ.ಎಸ್. ಜಯಪ್ರಕಾಶ ನಾರಾಯಣ ಗ್ರಂಥದ ಸಂಪಾದಕರು.
©2024 Book Brahma Private Limited.