ಸಾಹಿತ್ಯ, ಸಂಶೋಧನೆ, ಸಂಸ್ಕೃತಿ ಚಿಂತನೆ ಮತ್ತು ಕನ್ನಡಪರ ಹೋರಾಟಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಡಾ. ಎಂ. ಚಿದಾನಂದಮೂರ್ತಿ ಅವರ ಬದುಕು-ಸಾಧನೆಯ ಅವಲೋಕನ ಮಾಡಿರುವ ಸಂಸ್ಮರಣ ಸಂಪುಟ ‘ಚಿದಾನಂದ ಕಿರಣ’.
ಹಿರಿಯ ಸಂಶೋಧಕ ಡಾ. ಆರ್. ಶೇಷಶಾಸ್ತ್ರಿ ಅವರು ಈ ಕೃತಿಯ ಸಂಪಾದಕರು. ಚಿದಾನಂಮೂರ್ತಿ ಅವರ ಪ್ರಕಟಿತ ಎಲ್ಲ ಕೃತಿಗಳ ಮತ್ತು ಕನ್ನಡ ಹೋರಾಟದ ಪರಿಚಯ, ಪ್ರಕಟವಾಗಿರುವ ಸಂದರ್ಶನ ಮತ್ತು ಅವರ ವ್ಯಕ್ತಿತ್ವವನ್ನು ಕುರಿತು ಅವರ ಸಮಕಾಲೀನರು, ಕಿರಿಯರು ಬರೆದರುವ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ. ಕನ್ನಡ ಸಾರಸ್ವತ ಲೋಕದ ಅಸಾಮಾನ್ಯ ಸಾಧಕ ಚಿದಾನಂದಮೂರ್ತಿಯವರು ಭಾಷಾಶಾಸ್ತ್ರ, ಶಾಸನ ಶೋಧ, ಸಂಸ್ಕೃತಿ ಚಿಂತನೆ, ಛಂದಸ್ಸು, ಗ್ರಂಥ ಸಂಪಾದನೆ, ಜಾನಪದ ಅಧ್ಯಯನ ಹೀಗೆ ಹಲವು ಜ್ಞಾನಶಿಸ್ತುಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಬಹು ಆಯಾಮಗಳಲ್ಲಿ ನಾಡು-ನುಡಿಗೆ ಶ್ರಮಿಸಿದ ಅಪ್ರತಿಮ ಹೋರಾಟಗಾರ, ಕನ್ನಡ ಸಂಸ್ಕೃತಿ-ಭಾರತೀಯ ಸಂಸ್ಕೃತಿಗಳ ನೈಜ ಆರಾಧಕ ಚಿದಾನಂದಮೂರ್ತಿಯವರ ಸಿದ್ದಿ-ಸಾಧನೆಯ ಎಲ್ಲ ಮಗ್ಗಲುಗಳನ್ನು ಅವಲೋಕಿಸುವ ನೆನಪಿನ ಸಂಪುಟ ‘ಚಿದಾನಂದ ಕಿರಣ’.
©2025 Book Brahma Private Limited.