‘ಕಡಲು ಮತ್ತು ದಡ’ ನಾಗ ಐತಾಳರ ಸಂಸ್ಮರಣ ಗ್ರಂಥ. ಈ ಮಹತ್ವದ ಕೃತಿಯನ್ನು ಮೈ.ಶ್ರೀ. ನಟರಾಜ, ನಳಿನಿ ಮೈಸೂರು, ಪಿ.ಚಂದ್ರಿಕಾ ಅವರು ಸಂಪಾದಿಸಿದ್ದಾರೆ. ಇದಕ್ಕೆ ಲಕ್ಷ್ಮೀಶ ತೋಲ್ಪಾಡಿಯವರು ಬೆನ್ನುಡಿ ಬರೆದಿದ್ದು 'ಕಡಲೆಂದರೆ ಹತ್ತು ಮಕ್ಕಳ ತಾಯಿಯಲ್ಲವೆ! ಹೌದು. ನಾಗ ಐತಾಳರ ಕೋಟದಲ್ಲಿ 'ಹತ್ತು ಮಕ್ಕಳ ತಾಯಿ' ಎಂಬ ಹೆಸರಿನ ದೇವಸ್ಥಾನವಿದೆ. ಐತಾಳರ ಕುಟುಂಬದ ಎಲ್ಲರೂ ಈ ತಾಯಿಗೆ ನಡೆದುಕೊಳ್ಳುವರು. ಈ ತಾಯಿಯ ಎಲ್ಲ ಮಕ್ಕಳು ಸೇರಬಯಸುವ ದಡವೆಂದರೆ ಅದು ಅಮೆರಿಕಾ! ಐತಾಳರೂ ಸೇರಿಕೊಂಡರು ಈ ದಡವನ್ನು ಪಡುಗಡಲೇ ಹಿಂದೆತ್ತಿ ಬಿಸುಟಂತೆ ಪಶ್ಚಿಮದ ಈ ದಡಕ್ಕೆ ಈ ಮಗುವನ್ನು - ಏನು ಹೇಳಲಿ ನಾನು, ಪಶ್ಚಿಮದ ಭೋರ್ಗರೆತ! ಎಲ್ಲ ಹೆದ್ದೆರೆಗಳೇ ಇಲ್ಲಿ. ವಿದ್ಯೆ, ವಿಜ್ಞಾನ, ಸಂಪತ್ತು, ಸಾಹಸ, ಸಂಬಂಧಗಳ ಹೊಸ ಹಾಸು, ಹೊಸ ಹೊಕ್ಕು, ಹೊಸ ಜಾಲ, ಹೊಸ ವ್ಯೂಹ, ಹೊಸ ಸುಳಿ! ಹೊಸ ಝಣತ್ಕಾರ! ಎಲ್ಲ ನಿಜ, ಎಲ್ಲ ವಸ್ತುಸ್ಥಿತಿ, ವಸ್ತುಸ್ತುತಿ! ಆದರೆ ಐತಾರಳರ ಒಳಗೊಂದು ಎಳೆಜೀವ ನೆನೆಯುತ್ತಲೇ ಇತ್ತು ಹತ್ತು ಮಕ್ಕಳ ತಾಯಿಯನ್ನು! ನೆನೆದಂತೆ ತಬ್ಬಲಿಯಾಗಿ ತಟಸ್ಥವಾಗುತ್ತಿತ್ತು! ಅವರು ಕನ್ನಡಕ್ಕಾಗಿ ಮಾಡಿದ ಎಲ್ಲ ಕೈಂಕರ್ಯವೂ ಕೋಟದ ಕಡಲ ಮೊರೆತ ಮರಳಿ ಕೇಳುವ ಹಂಬಲದಿಂದ ಮಾಡಿದವು ಎಂಬುವುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದಿದ್ದಾರೆ.
©2024 Book Brahma Private Limited.