ಡಾ ವಿ.ಎ. ವಿವೇಕ ರೈ ಅವರು ಜರ್ಮನಿವರೆಗೂ ಕನ್ನಡದ ಕಂಪು ಹರಡಿದವರು. ಅವರು ಬರೆದ ಕಥೆ, ಹಾಡು, ಪ್ರಬಂಧದಿಂದ ಹಿಡಿದು ಇತ್ತೀಚೆಗೆ ಬರೆದ ಎಲ್ಲ ಬರಹಗಳನ್ನು ಕೃತಿ ಒಳಗೊಂಡಿದೆ. ತುಳು ಗಾದೆ, ಫೇಸ್‌ಬುಕ್ ಬರಹ, ಅಂಕಣ, ಅನುವಾದ, ಚಿತ್ರಗೀತೆ, ವಿಶ್ಲೇಷಣೆಯನ್ನೂ ಓದುಗರು ಸವಿಯಬಹುದು. ಅವರ ಅಗಾಧ ಅನುಭವ, ತಿಳಿವಳಿಕೆಯನ್ನು ಓದುಗರಿಗೆ ದಾಟಿಸಲು ಕೃತಿ ಯಶಸ್ವಿಯಾಗಿದೆ.
ಸಾಧಕ ವ್ಯಕ್ತಿತ್ವದತ್ತ ಒಂದು ಇಣುಕು ನೋಟ
ಕನ್ನಡ ಸ್ನಾತಕೋತ್ತರ ಶಿಕ್ಷಣ ಲೋಕದಲ್ಲಿ ಬೋಧಕರಾಗಿ, ಎರಡು ವಿಶ್ವವಿದ್ಯಾಲಯಗಳ ಅಪರ ಮನೆ ಕುಲಪತಿಗಳಾಗಿ, ಹಲವು ವಿದೇಶಿ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಜೊತೆಗೆ ತುಳು ಭಾಷೆಯ ಸಶಕ್ತ ವಿದ್ವಾಂಸರೂ ಆಗಿ ಕನ್ನಡಿಗರಿಗೆ ಚಿರಪರಿಚಿತರಾದ ಡಾ. ಬಿ.ಎ. ವಿವೇಕ ರೈ. ಅವರಿಗೆ ೭೨ ವರ್ಷಗಳಾದಾಗ ಆ ಸಂದರ್ಭದ ನೆನಪಿನಲ್ಲಿ ಪ್ರಕಟವಾಗಿರುವ ಈ ಪುಸ್ತಕ ನಾಲ್ಕು ದಶಕಗಳ ಅವರ ಅಕ್ಕರ ಸೇವೆಯ ವಿವಿಧ ಮುಖಗಳನ್ನು ಪರಿಚಯಿಸುವ ೪೦ ಬರಹಗಳನ್ನು ಒಳಗೊಂಡಿದೆ. ಈ ಪುಸ್ತಕವನ್ನು ಸಂಯೋಜಿಸಿರುವ ಜಿ.ಎನ್. ಮೋಹನ್ ಇವನ್ನು ಹತ್ತು ವಿಭಾಗಳಲ್ಲಿ ವಿಂಗಡಿಸಿದ್ದಾರೆ. ಅಂಕಣ ಬರಹ, ಸಾಹಿತ್ಯ ವಿಮರ್ಶೆ, ಕವಿತೆ, ವ್ಯಕ್ತಿಚಿತ್ರಗಳು, ಈ ಭಾಷಾವಿವೇಚನೆ, ಪ್ರವಾಸಾನುಭವಗಳು ಹೀಗೆ ರೈ ಕೈಯಾಡಿಸಿರುವ ಎಲ್ಲ ಸಾಹಿತ್ಯ ಪ್ರಕಾರಗಳ ಪ್ರಾತಿನಿಧಿಕ ಬರಹಗಳು ಇಲ್ಲಿದ್ದು ಅವರ ಪ್ರತಿಭಾ ವಿಶೇಷಗಳನ್ನು ಪ್ರತಿಬಿಂಬಿಸುವ ಪ್ರಯತ್ನ ಮಾಡುತ್ತವೆ.
ದ.ಕ. ಜಿಲ್ಲೆಯ ಪುತ್ತೂರು ಬಳಿಯ ಅಗ್ರಾಳ ಎಂಬ ಕುಗ್ರಾಮವೊಂದರ ಬಡ; ಆದರೆ ಶಿವರಾಮ ಕಾರಂತರಿಗೆ ಆಪ್ತವಾದ ಸುಸಂಸ್ಕೃತ ಕುಟುಂಬವೊಂದರಲ್ಲಿ ರು ಹುಟ್ಟಿದ ವಿವೇಕ ರೈ ಎಂಬ ಹುಡುಗ (ಇವರಿಗೆ ವಿವೇಕ ಎಂದು ಹೆಸರು ೧ ಸೂಚಿಸಿದ್ದು ಕಾರಂತರೇ ಅಂತೆ.) ನಿಸರ್ಗದ ಗಾಳಿ, ಮಣ್ಣು, ಹಸಿರು, ನೀರು ಗೆ ಇವೇ ಅಕ್ಷರಗಳಾಗಿ ಮೂಡಿ ಬದುಕಿನ ಮೆಟ್ಟಿಲುಗಳಾಗಿವೆ ಎಂದು ಭಾವಿಸಿ ಬರೆದು ಎತ್ತರಕ್ಕೆ ಬೆಳೆದ ಪರಿಯನ್ನೂ ಈ ಪುಸ್ತಕ ನಮ್ಮ ಮುಂದಿಡುತ್ತದೆ.
ಶಿವರಾಮ ಕಾರಂತರ ವ್ಯಕ್ತಿತ್ವದ ನೆರಳಿನಲ್ಲಿ ಅವರ ವ್ಯಕ್ತಿತ್ವದ ಕಣ್ಣಾಸರೆಯಲ್ಲಿ, ಅವರ ಬಹುಮುಖ ಪ್ರತಿಭೆಯ ದಟ್ಟ ಪ್ರಭಾವದಲ್ಲಿ ಬೆಳೆದ ರೈಗಳು ತಮ್ಮ ಬಾಲ್ಯದಲ್ಲಿ ಕಾರಂತರ 'ಬದುಕೆಂಬ ಪ್ರಯೋಗಶಾಲೆಯ ಆ ಕಠಿಣ ಪರೀಕ್ಷೆ’ಯ-ನೆನಪುಗಳನ್ನು - ಇಲ್ಲಿ ವಿವರವಾಗಿ ದಾಖಲಿಸಿದ್ದು ಅದನ್ನು ಓದುವುದೇ ಒಂದು ಸಾರ್ಥಕ ಅನುಭವೆನ್ನಿಸಿಬಿಡುತ್ತದೆ, ಇದರ ಜೊತೆಗೇ ರೈ ಅವರು ಎಸ್.ವಿ. ಪರಮೇಶ್ವರ ಭಟ್ಟ, ಹಾ.ಮಾ.ನಾ., ಎಂ.ಎಂ. ಕಲ್ಬುರ್ಗಿ ಅವರ ಒಡನಾಟದ ಅನುಭವ ಕಥನಗಳೂ ಇಲ್ಲಿ ಸೇರಿವೆ. ಇವುಗಳ ಜೊತೆಗೇ ಹೆಸರಿಸಬಹುದಾದ ಇತರ ಸಾಹಿತ್ಯಕ ಬರಹಗಳೆಂದರೆ ಗಿರಿಯವರ 'ಗತಿ ಸ್ಥಿತಿ' ಕಾದಂಬರಿ ಮತ್ತು ಸಿ.ಎನ್. ರಾಮಚಂದ್ರನ್ ಅವರ ವಿಮರ್ಶೆಯನ್ನು ಕುರಿತ ಲೇಖನಗಳು.
ಇನ್ನು ತುಳುವಿಗೆ ಸಂಬಂಧಿಸಿದಂತೆ ರೈ ಅವರು ಬರೆದ ಕವಿತೆಗಳು, ಚುಟುಕುಗಳು, ಸಂಗ್ರಹಿಸಿದ ಒಗಟು-ಗಾದೆಗಳು ಮತ್ತು ಕೋಟಿ ಚೆನ್ನಯ ಚಿತ್ರಕ್ಕೆ ಬರೆದ ಗೀತೆಗಳಿವೆ.
ಪ್ರವಾಸಕ್ಕೆ ಸಂಬಂಧಿಸಿದಂತೆ ಇರುವ ಇಲ್ಲಿನ ಲೇಖನಗಳಲ್ಲಿ ಭಾರತದ ಮಣಿಪುರದಿಂದ ಹಿಡಿದು ಜರ್ಮನಿ, ಸ್ವಿಟ್ಟರ್‌ಲೆಂಡ್, ಫಿನ್‌ಲೆಂಡ್‌ಗಳ ಅಧ್ಯಯನ-ಸಂಶೋಧನೆ-ಬೋಧನೆಯ ಉದ್ದೇಶಗಳ ಪ್ರವಾಸ ಸಂದರ್ಭದ ಅನೇಕ ರೈ ಅವರ ಸೂಕ್ಷ್ಮಗ್ರಾಹಿ ಗುಣವನ್ನು ನಿರೂಪಿಸುವ-ಸ್ವಾರಸ್ಯಕರ ಮತ್ತು ಜ್ಞಾನದಾಯಕ ಮಾಹಿತಿ ಕಿಕ್ಕಿರಿದಿದೆ. ಜೊತೆಗೇ ಇದಕ್ಕೆ ಪೂರಕವೆಂಬಂತೆ ಅಲ್ಲಿ ಅವರು ಅನುವಾದಿಸಿದ ಕತೆಗಳೂ ಇವೆ. 'ಮದರ್ ಡೇ' ಸಂಸರ್ಭದಲ್ಲಿ ಅಲ್ಲಿ ಬರೆದ ತಾಯಿಯ ಆದ್ರ್ರ ನೆನಪಿನ ಲೇಖನವೂ ಇಲ್ಲಿ ಸೇರಿದೆ. ಒಟ್ಟಿನಲ್ಲಿ ಈ ಪುಸ್ತಕ ವಿವೇಕ ರೈ ಅವರ ವ್ಯಕ್ತಿತ್ವ ವಿಶೇಷಗಳ ಒಂದು ಇಣುಕುನೋಟವನ್ನು ನೀಡುವಲ್ಲಿ ಸಫಲವಾಗಿದೆಯಾದರೂ, ಇದರ ಸಂಯೋಜನೆ ಇನ್ನಷ್ಟು ಸುಸಂಗತ ಮತ್ತು ಪೂರ್ಣವಾಗಿರಬಹುದಿತ್ತು ವಾಗಿರಬಹುದಿತ್ತು ಎನ್ನಿಸದಿರದು. ಮುಖ್ಯವಾಗಿ ರೈ ಅವರ ಬೋಧನೆ ಮತ್ತು ಆಡಳಿತ ಅನುಭವಗಳನ್ನು ನಿರೂಪಿಸುವ ಬರಹಗಳ, ಸಾಮದರ್ಭಿಕ ಭಾವಚಿತ್ರಗಳ, ಲೇಖನಗಳ ಕಾಲ, ಸಂದರ್ಭ ಮತ್ತು ಆಕರ ಸೂಚಿಗಳ ಕೊರತೆ ಮತ್ತು ಲೇಖನಗಳ ವಿಂಗಡಣೆಯ ಹಿಂದಿನ ಒಂದು ಸುಸಂಗತ ಸೂತ್ರದ ಕೊರತೆಗಳು ಎದ್ದು ಕಾಣುತ್ತವೆ.
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದಿ ಮಾಸಿಕ ಪತ್ರಿಕೆ (ಫೆಬ್ರವರಿ 2019)
©2025 Book Brahma Private Limited.