ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಸಾಧಿಸಿ, ವಿಶ್ವಮಟ್ಟದಲ್ಲಿ ಕನ್ನಡದ ಕಂಪನ್ನು ಪಸರಿದವರು ಎ. ಕೆ. ರಾಮಾನುಜನ್. ಕವಿ, ಚಿಂತಕ, ಪ್ರಾಧ್ಯಾಪಕ, ಜನಪದ ತಜ್ಞ, ಭಾಷಾ ತಜ್ಞ ಹೀಗೆ ಅನೇಕ ಪ್ರಕಾರದಲ್ಲಿ ಆಳವಾದ ಜ್ಞಾನ ಹೊಂದಿದ್ದ ಅವರ ಕುರಿತು ಪ್ರತಿಭಾ ನಂದಕುಮಾರ್, ಯು. ಆರ್. ಅನಂತಮೂರ್ತಿ ಮುಂತಾದವರು ಬರೆದ ಲೇಖನಗಳು ಇಲ್ಲಿವೆ. ‘ಅಕ್ರೂರ ನೆನಪುಗಳು (ಎಚ್. ಕೆ. ರಾಮಚಂದ್ರಮೂರ್ತಿ), ರಾಮಾನುಜನ್, ಏಕೆ? (ವೈ. ಎನ್. ಕೆ.), ಶ್ಲೋಕ, ಷಟ್ಟದಿಗಳ ನಡುವೆ... ಚಿಗುರು ಮಾವಿನೆಲೆ ಮೂರು' (ಪಿ. ಲಂಕೇಶ್), `ರಾಮಾನುಜನ್ : ಮಹಾಪ್ರತಿಭೆ' (ಸುಮತೀಂದ್ರ ನಾಡಿಗ), ವೈವಿಧ್ಯಮಯ ವ್ಯಕ್ತಿತ್ವ - ಅನನ್ಯ ಪ್ರತಿಭೆ (ಪಿ. ಶ್ರೀನಿವಾಸ ರಾವ್) ಮುಂತಾದ ಲೇಖನಗಳನ್ನು ಲೇಖಕ ಟಿ. ಪಿ. ಅಶೋಕ್ ಅವರು ಸಂಪಾದಿಸಿದ್ದಾರೆ.
©2025 Book Brahma Private Limited.