’ಬಹುರೂಪಿ ಗಿರೀಶ್ ಕಾರ್ನಾಡ್’ ಪತ್ರಕರ್ತ, ಲೇಖಕರ ಜೋಗಿ ಅವರ ಸಂಪಾದಿತ ಪುಸ್ತಕ . ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಬಹುಮುಖಿ ಬದುಕನ್ನು ಕಟ್ಟಿಕೊಡುವ ಕೃತಿ. ಈ ಪುಸ್ತಕದಲ್ಲಿ ಗಿರೀಶ್ ಕಾರ್ನಾಡರ ಆತ್ಮೀಯರು, ಆಪ್ತರು, ಸ್ನೇಹಿತರು ಬರೆದಿರುವ ಲೇಖನಗಳನ್ನು ಇಲ್ಲಿ ಸಂಕಲಿಸಲಾಗಿದೆ.
ನಿರ್ದೇಶಕರಾದ ಕೆ.ಎಂ. ಚೈತನ್ಯ, ಕವಿತಾ ಲಂಕೇಶ್, ಟಿ. ಎಸ್ ನಾಗಾಭರಣ ಅವರು ಸಿನೆಮಾರಂಗ ಹಾಗೂ ಕಾರ್ನಾಡರ ಸಂಬಂಧದ ಅನುಭವಗಳನ್ನು ದಾಖಲಿಸಿದ್ದಾರೆ. ಲೇಖಕರಾದ ಪಾಲಹಳ್ಳಿ ವಿಶ್ವನಾಥ್ ಕಾರ್ನಾಡರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಕಾರ್ನಾಡರು ತಮ್ಮ ಸಮಕಾಲೀನ ಮರಾಠಿ, ಹಿಂದಿ, ಬಂಗಾಲಿ ನಾಟಕಕಾರರೊಂದಿಗೆ ಹೇಗೆ ಪುರಾಣಪಾತ್ರಗಳ ಹೊಸದೃಷ್ಟಿಕೋನವನ್ನು ತೆರೆದರು ಎಂಬುದರ ಬಗ್ಗೆ ಅಮೃತಾ ದತ್ತರು ವಿವರಿಸಿದ್ದಾರೆ.
ರಾಮಚಂದ್ರ ಗುಹಾ, ಸದಾನಂದ ಮೆನನ್, ನವನೀತಾ ಸೇನ್, ಬಾಗೇಶ್ರೀ, ಋತ್ವಿಕ್ ಸಿಂಹ ಮುರಳೀಧರ ಖಜಾನೆ, ಸುಧನ್ವ ದೇಶಪಾಂಡೆ, ಗೀತಾ ಹರಿಹರನ್, ಉಮಾ ಮಹಾದೇವನ್ ಅವರ ಬರಹಗಳು ಅವರ ಅನುಭವ ನೋಟದಲ್ಲಿ ಕಾರ್ನಾಡರನ್ನು ಕಂಡ ಬಗೆಯನ್ನು ಲೇಖನಗಳು ನೀಡುತ್ತವೆ.
©2025 Book Brahma Private Limited.