ಸಂತನ ಕಣ್ಣಿನಿಂದ ಜಾಗವನ್ನು ನೋಡಿದವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಅವರ 'ಯೇಗ್ದಾಗೆಲ್ಲಾ ಐತೆ' ಓದಿದರೆ ಸಾಕು ಕೃಷ್ಣಶಾಸ್ತ್ರಿಗಳ 'ತಿಳಿ ಲೋಕ' ಅರ್ಥವಾಗುತ್ತದೆ. ಅಂತಹ ಮಹಾ 'ಅನುಭಾವರ'ನ್ನು ಕುರಿತ ಪುಸ್ತಕ 'ಆಕಾಶದಗಲ ನಗುವಿನ ಅವಧೂತ'. ಲೇಖಕಿಯರಾದ ಪಿ ಚಂದ್ರಿಕಾ ಮತ್ತು ವಂದನಾ ಸತೀಶ್ ಕೃತಿಯನ್ನು ಹೊರತಂದಿದ್ದಾರೆ. ಅಂದಹಾಗೆ ಕೃಷ್ಣಶಾಸ್ತ್ರಿಗಳ ಬಗ್ಗೆ ಗಣ್ಯರು ವರ್ಣಿಸಿರುವುದು ಹೀಗೆ:
*....ಸರಿ ಸುಮಾರು ಅರವತ್ತು ವರ್ಷಗಳ ಬದುಕನ್ನು ಊರಿಂದ ಊರಿಗೆ, ಗುರುವಿನಿಂದ ಗುರುವಿಗೆ, ಸಾಧನೆಯಿಂದ ಸಾಧನೆಗೆ ಅಪ್ಪಟ ಪರಿವ್ರಾಜಕನಂತೆ ಏನನ್ನೋ ಹುಡುಕುತ್ತ, ಎಲ್ಲವೂ ಸಿಕ್ಕಿಬಿಟ್ಟವನಂತೆ, ಸಿಕ್ಕಿದ್ದನ್ನೆಲ್ಲ ಅಲ್ಲೇ ಬಿಟ್ಟವನಂತೆ ಅಲೆದುಬಿಟ್ಟ ಈತನಿಗೆ ನೆನಪುಗಳದೊಂದು ಕೊರತೆಯಾ? .....'
- ರವಿ ಬೆಳಗೆರೆ (ಖಾಸ್ ಬಾತ್, ಹಾಯ್ ಬೆಂಗಳೂರು)
ಸಾಕ್ರೆಟಿಸ್‌ನನ್ನು ಕುರಿತು ಪ್ಲೇಟೋ ಹೇಳುತ್ತಾನೆ: Thank god I am fortunate, I am bom, when Socrates is alive' ಎಂದು. ನಾವೂ ಅವನೊಡನೆ ದನಿಗೂಡಿಸೋಣ: “ಭಗವಂತನಿಗೆ ಅನಂತ ರ್ಪಣಾಮಗಳು; ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳು ಬದುಕಿರುವ ದಿನಗಳಲ್ಲಿ ನಮಗೆ ಜನನ ಕೊಟ್ಟಿದ್ದಾನೆ. ಆ ಪುಣ್ಯಚೇತನವನ್ನು ಕಣ್ಣಾರೆ ಕಾಣುವ, ಮನಸಾರೆ ಅವರೊಡನೆ ಮಾತನಾಡುವ ಭಾಗ್ಯ ಕರುಣಿಸಿದ್ದಾನೆ ಎಂದು'.
- ಸಾ. ಶಿ. ಮರುಳಯ್ಯ
©2025 Book Brahma Private Limited.