ಸಜ್ಜನ ರಾಜಕಾರಣಿ, ವಿಧಾನಸಭೆಯ ಶಾಸಕರಾಗಿದ್ದ ಬಿ. ಸ್ವಾಮಿರಾಯರ ಬದುಕು ಮತ್ತು ಸಾಧನೆಗಳನ್ನು ’ಸ್ವ ಧ್ವನಿ’ ಪುಸ್ತಕದಲ್ಲಿ ಸಂಕಲಿಸಲಾಗಿದೆ. ಪಟಮಕ್ಕಿ ರತ್ನಾಕರ್, ಕಬಸೆ ಅಶೋಕಮೂರ್ತಿ, ಮಧು ಗಣಪತಿರಾವ್ ಮಡೆನೂರು, ವೈ.ಕೆ. ರಾಮಚಂದ್ರಪ್ಪನವರ ಸಂಪಾದನೆಯಲ್ಲಿ ಈ ಕೃತಿಯನ್ನು ಹೊರತರಲಾಗಿದೆ.
’ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡಲು ಅನುಕೂಲ ಕಲ್ಪಸಿಕೊಟ್ಟರು. ಅವರು ಕುಲಪತಿ ಭವನದಲ್ಲಿ ಕುವೆಂಪು ಮಗ ಕೆ.ಪಿ ಪೂರ್ಣಚಂದ್ರ ತೇಜಸ್ವಿ , ಸಿ.ಪಿ.ಕೆ , ಕಡಿದಾಳ್ ಶಾಮಣ್ಣ , ಸುಂದರೇಶ್ , ಅವರ ಒಡನಾಡಿಯಾಗಿ ಓದಿದ್ದರು. ಕುವೆಂಪು ಅವರ ವೈಚಾರಿಕತೆಯನ್ನು ಮೈಗೂಡಿಸಿಕೊಂಡರು. ಇದು ಅವರ ಹಿರಿಮೆ’ ಎಂದು ಲೇಖಕ - ಕೋಣಂದೂರು ವೆಂಕಪ್ಪಗೌಡ ಅವರ ಬಗ್ಗೆ ಮೆಚ್ಚುಗೆ ತಿಳಿಸಿದ್ದಾರೆ.
ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ ಅವರು - ”ಬಿ. ಸ್ವಾಮಿರಾಯರು ಸದನದಲ್ಲಿ ಜ್ವಲಂತ ಸಮಸ್ಯೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ರಾಜ್ಯದ ಗಮನ ಸೆಳೆಯುತ್ತಿದ್ದರು. ಸ್ವಾಮಿರಾಯರ ಪ್ರಶ್ನೋತ್ತರ ವೇಳೆಯಲ್ಲಿ ನಾನು ಎಂದೂ ಸದನಕ್ಕೆ ಗೈರಾಗಿರುತ್ತಿರಲಿಲ್ಲ ಎಂದು ಹೇಳಿದ ಮಾತು ಅತಿಶಯೋಕ್ತಿಯಲ್ಲ ಎನಿಸಿತು.’ ಎಂದಿದ್ದಾರೆ.
©2025 Book Brahma Private Limited.