ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ವಲಯದಲ್ಲಿ ಪ್ರೊ.ಸೂಗಯ್ಯ ಹಿರೇಮಠ ಅವರ ಹೆಸರು ಚಿರಪರಿಚಿತ. ಹತ್ತು ಹಲವು ಕೃತಿಗಳನ್ನು ಬರೆದ ಜಾನಪದ ತಜ್ಞ ಪ್ರೊ. ಸೂಗಯ್ಯ ಹಿರೇಮಠ, ಅನಿರೀಕ್ಷಿತವಾಗಿ ಮರೆಯಾದಾಗ ಆತ್ಮೀಯ ಬಳಗದ ಆಶಯವಾಗಿ ಸಾಹಿತಿ ಪ. ಮಾನುಸಗರ ಅವರು, ಪ್ರತಿಯೊಬ್ಬರಿಂದ ಲೇಖನಗಳನ್ನು ಬರೆಯಿಸಿ, ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸುವ ಮೂಲಕ ಹಿರೇಮಠ ಅವರನ್ನು ಅಮರರಾಗಿಸಿದ ಕಳಕಳಿಯ ದ್ಯೋತಕವಾಗಿ ಈ ಕೃತಿ ಪ್ರಕಟಗೊಂಡಿದೆ. ಸಗರನಾಡಿನ (ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಸೇರಿ) ಪ್ರದೇಶದ ಬಗ್ಗೆ ನಡೆ-ನುಡಿಯ ವಿಶೇಷ ಅಭಿಮಾನದೊಂದಿಗೆ ಬದುಕಿದ್ದ ಪ್ರೊ. ಸೂಗಯ್ಯ ಹಿರೇಮಠ ವ್ಯಕ್ತಿತ್ವದ ವಿವಿಧ ವೈಚಾರಿಕ ಆಯಾಮಗಳನ್ನುಇಲ್ಲಿಯ ಲೇಖನಗಳು ಪ್ರತಿಫಲಿಸುತ್ತವೆ. ಅವರ ಸಮಗ್ರ ಸಾಹಿತ್ಯ ದರ್ಶನದ ಸಂಕ್ಷಿಪ್ತ ಮಾಹಿತಿಯೂ ನೀಡುತ್ತದೆ.
©2025 Book Brahma Private Limited.