ಕವಿ, ಕಥೆಗಾರ, ಕಲಾವಿದ, ಸಾಕ್ಷ್ಯಚಿತ್ರ ನಿರ್ಮಾಪಕ, ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದ ಚಲಂ ಬೆನ್ನೂರಕರ್ ಬದುಕಿದ್ದಾಗ ಅವರ ಯಾವ ಪುಸ್ತಕಗಳೂ ಪ್ರಕಟವಾಗಲಿಲ್ಲ.
ಅವರು ತೀರಿಕೊಂಡ ಎರಡು ವರ್ಷಗಳ ಬಳಿಕ ಸಂಸ್ಮರಣೆಯ ನೆಪದಲ್ಲಿ ಕನ್ನಡದ ಅತ್ಯುತ್ತಮ ಬರಹಗಾರರಾದ ಚಂದ್ರಶೇಖರ ತಾಳ್ಯ ಮತ್ತು ಕೇಶವ ಮಳಗಿ ಅವರ ಬರಹಗಳನ್ನು ಸಂಪಾದಿಸಿದ್ದಾರೆ. ಕನ್ನಡದಲ್ಲಿ ಬರೆದ ಕಥೆ, ಕವಿತೆಗಳಲ್ಲದೆ, ಇಂಗ್ಲಿಷ್‌ನಲ್ಲಿ ಬರೆದ ಲೇಖನ, ಸಂದರ್ಶನ, ಪತ್ರಗಳನ್ನೂ ಅವುಗಳ ಅನುವಾದವನ್ನೂ ನೀಡಲಾಗಿದೆ.
©2025 Book Brahma Private Limited.