ಕಲಬುರ್ಗಿ ಅವರ ಬರಹದ ಶೈಲಿ, ಅವರ ಚಿಂತನಾ ಕ್ರಮ, ಬಹುಶ್ರುತ ವಿದ್ವತ್ತನ್ನು ಪರಿಚಯಿಸುವ ಉದ್ದೇಶದಿಂದ ರೂಪಿಸಲಾದ ವಾಚಿಕೆ ಇದು. ಮುಖ್ಯವಾಗಿ ಯುವ ಬರಹಗಾರರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಗ್ರಂಥವನ್ನು ಸಿದ್ಧಪಡಿಸಲಾಗಿದೆ. ಕಲಬುರ್ಗಿ ಅವರ ಮಾರ್ಗ ಸಂಪುಟದ ಹದಿನೈದು ಲೇಖನಗಳನ್ನು ಆಯ್ದು ಕೃತಿಯನ್ನು ಸಿದ್ಧಪಡಿಸಲಾಗಿದೆ. ಈ ಲೇಖನಗಳಿಗೆ ಪೂರಕವಾದ ಉಲ್ಲೇಖಗಳು ಹಾಗೂ ಕಲಬುರ್ಗಿ ಅವರನ್ನು ಪ್ರಭಾವಿಸಿದ ವ್ಯಕ್ತಿ ಮತ್ತು ಘಟನೆಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಸಾಂಸ್ಕೃತಿಕ ವಲಯದ ಗಣ್ಯರಾದ ಡಾ.ರಾಜೇಂದ್ರ ಚನ್ನಿ, ಡಾ. ರಹಮತ್ ತರೀಕೆರೆ ಹಾಗೂ ಡಾ. ಮೀನಾಕ್ಷಿ ಬಾಳಿ ಕೃತಿಯನ್ನು ಸಂಪಾದಿಸಿದ್ದಾರೆ.
ಎಂ. ಎಂ. ಕಲಬುರ್ಗಿ ಅವರ ಆಯ್ದ ಚಿಂತನೆಗಳ ಸಂಗ್ರಹ. ’ಭಾರತದಂಥ ಭಾವನಿಷ್ಠ ರಾಷ್ಟ್ರದಲ್ಲಿ ಸಂಶೋಧನೆ ಸರಳದಾರಿಯಲ್ಲ' ಎನ್ನುವ ಸ್ಪಷ್ಟತೆಯಿದ್ದ ಕಲಬುರ್ಗಿ ತನ್ನ ಸಂಶೋಧನೆಯ ವಿರುದ್ದ ಪ್ರತಿರೋಧಗಳನ್ನು ನಿರೀಕ್ಷಿಸಿದ್ದರು. ಅವರ ನೆನೆಯುವುದು ಎಂದರೆ ಕಲಬುರ್ಗಿಯವರ ಬರಹಗಳ ಓದುವುದು. ಆಯ್ದ ಬರಹಗಳ ಈ ಕೃತಿ ಕಲಬುರ್ಗಿಗೆ ಸಲ್ಲಿಸಿದ ಅರ್ಥಪೂರ್ಣ ಶೃದ್ದಾಂಜಲಿ. ಕೊನೆಯಲ್ಲಿ ಕಲಬುರ್ಗಿಯವರ ಉಲ್ಲೇಖನೀಯ ಹೇಳಿಕೆಗಳು ಮತ್ತು ಚಿಂತನೆಯ ಸಾಲುಗಳನ್ನು ನೀಡಲಾಗಿದೆ. ವಚನಗಳ ಭಾಷೆ ಕುರಿತ ಚರ್ಚೆಯಲ್ಲಿ ’ಭಾಷೆಯು ಸಾಹಿತ್ಯದ ಮೂಲಕ ಯಾವುದನ್ನೇ ಅಭಿವ್ಯಕ್ತಿಸುವುದನ್ನಲ್ಲ, ಸ್ಥಾಪಿಸುವುದನ್ನು ಮಾಡುತ್ತದೆ' ಎಂಬ ನಿಲುವು ಅವರದು. ಕನ್ನಡ ಮಾತೃಭಾಷಾ ಪ್ರಜ್ಞೆಯ ಇತಿಹಾಸ ಅವಲೋಕಿಸುವ ಅವರು ಅದರ ಮಿತಿ ವ್ಯಾಪ್ತಿಗಳನ್ನೂ ಚರ್ಚಿಸುತ್ತಾರೆ. ವಚನಗಳು ಕೇಂದ್ರದಲ್ಲಿ ಇಟ್ಟು ಭಾಷೆ ಸಾಹಿತ್ಯ, ಸಂಸ್ಕೃತಿಯ ಚರ್ಚಿಸುವುದಕ್ಕೆ ಆದ್ಯತೆ ನೀಡುತ್ತದೆ. ಕಲಬುರ್ಗಿ ಅವರ ಚಿಂತನೆಯ ಸ್ಥೂಲ ಪರಿಚಯ ಮಾಡಿಕೊಡುತ್ತದೆ.
©2024 Book Brahma Private Limited.