ಅದು 1965. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಪೀಠಾರೋಹಣ ಮಾಡಿದ್ದ ಹೊಸದಿನಗಳು. ಆಗ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ ಲಿಂಗಾಯತ ಅಧ್ಯಯನ ಸಂಸ್ಥೆ ರೂಪುಗೊಂಡಿತು. ಅಂದಿನಿಂದಲೂ ಸಂಸ್ಥೆಯ ಪ್ರಸಾರಂಗದ ಹೊಣೆ ಹೊತ್ತವರು ಕಲಬುರ್ಗಿ. ಅಪ್ರಕಟಿತ ಲಿಂಗಾಯತ ಸಾಹಿತ್ಯ, ಶರಣರ ಸಾಹಿತ್ಯ ಮಾಲೆ ಮುಂತಾದ ಯೋಜನೆಗಳ ಮೂಲಕ ಸಂಸ್ಥೆಯನ್ನು ಅವರು ಕಟ್ಟಿಬೆಳೆಸಿದ ರೀತಿ ಅನನ್ಯ. ಸಿದ್ದಲಿಂಗ ಸ್ವಾಮೀಜಿ ಮತ್ತು ಕಲಬುರ್ಗಿ ಅವರು ಈ ಸಂಸ್ಥೆಗಾಗಿ ಜೋಡಿ ಎತ್ತುಗಳಂತೆ ದುಡಿದವರು.
ಕಲಬುರ್ಗಿ ಅವರು ಸಂಸ್ಥೆಯೊಂದಿಗೆ ಹೊಂದಿದ್ದ ನಂಟನ್ನು ಹಲವು ರೀತಿಯಲ್ಲಿ ವಿಷದ ಪಡಿಸುತ್ತದೆ ಕೃತಿ. ಪ್ರಕಾಶ ಗಿರಿಮಲ್ಲನವರ ಈ ಕೃತಿಯ ಲೇಖಕರು.
©2025 Book Brahma Private Limited.