ಸುವರ್ಣ ವಿಕಾಸ

Author : ಎಸ್.ಎಲ್. ಶ್ರೀನಿವಾಸ ಮೂರ್ತಿ

Pages 230

₹ 240.00




Year of Publication: 2016
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಸಾಹಿತ್ಯ-ಸಂಸ್ಕೃತಿ-ಸಮಾಜಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡ ಸಂಸ್ಥೆ ಬೆಂಗಳೂರಿನ ಉದಯಭಾನು ಕಲಾಸಂಘ.  ಸ್ವಾತಂತ್ಯ್ರ ಪೂರ್ವ ಮತ್ತು ಸ್ವಾತಂತ್ಯ್ರೋತ್ತರ ಕಾಲಘಟ್ಟದಲ್ಲಿ ಸ್ವಯಂಸೇವಾ ಚಟುವಟಿಕೆಗಳು ಆಧುನಿಕ ಭಾರತ ಕಟ್ಟುವಲ್ಲಿ ಶ್ರಮಿಸಿದ್ದವು. ಅಂತಹ ಪ್ರಯತ್ನದಲ್ಲಿ ಕೆಲವು ತರುಣರ ಕನಸುಗಳು ಈ ಉದಯಭಾನು ಕಲಾಸಂಘದ ಮೂಲಕ 1965ರಲ್ಲಿ ನನಸಾದವು. ಉದಯಭಾನು ಕಲಾಸಂಘವು ಭಾಷೆ, ಸಾಹಿತ್ಯ, ಮತ್ತುಸಂಸ್ಕೃತಿ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಅಧ್ಯಯನಾಂಗಗಳ ಕುರಿತಾದ ವಿಷಯಗಳ ಬಗ್ಗೆ ಕಾರ್ಯೋನ್ಮುಖವಾಗಿ ಕೆಲಸ ಮಾಡುತ್ತಿದೆ. ಕಲಾಸಂಘದ ಆಯ್ದ ಸಾಹಿತ್ಯ ಸಿರಿ, ಲೇಖನ, ಕೃತಿಗಳ ಬಗ್ಗೆ ಈ ’ಸುವರ್ಣ ವಿಕಾಸ ’ ಪುಸ್ತಕದಲ್ಲಿ ಮಾಹಿತಿ ಸಂಗ್ರಹಣೆ ಸಂಪಾದನೆಯಲ್ಲಿ ಹೊರತಂದಿದ್ಧಾರೆ.

About the Author

ಎಸ್.ಎಲ್. ಶ್ರೀನಿವಾಸ ಮೂರ್ತಿ

ಡಾ, ಎಸ್.ಎಲ್ ಶ್ರಿನಿವಾಸಮೂರ್ತಿ ಅವರು ವಿಜಯ ಪದವಿ ಪೂರ್ವ ಕಾಲೇಜಿನ  ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು. ಸಸ್ಯ ಅಂಗಾಂಶ ಕೃಷಿ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಜಮಿನ್ ಲೂಯಿರೈಸ್ ರವರ ಜೀವನ ಮತ್ತು ಸಾಧನೆಯನ್ನು ಕುರಿತಂತೆ ರಚಿಸಿದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನು ಪಡೆದಿದ್ಧಾರೆ. ಪಾ.ವೆಂ. ಆಚಾರ್‍ಯರ ಸಮಗ್ರ ಬರಹಗಳ ಹಲವು ಸಂಪುಟಗಳನ್ನು ಸಂಪಾದಿಸಿದ್ದಾರೆ. ಕೃತಿ ಸಂಪಾದನೆ, ಪುಸ್ತಕ ಸಂಪಾದನೆ , ಪುಸ್ತಕ ವಿಮರ್ಶೆ, ಕಾರ್ಯದಲ್ಲಿ ತಮ್ನನ್ನು ತೊಡಗಿಸಿಕೊಂಡಿದ್ದಾರೆ.  ...

READ MORE

Related Books