ರಾಜಕೀಯ , ಸಮಾಜ ಸೇವೆ, ಹಾಗೂ ಪತ್ರಿಕೋದ್ಯಮ ಪರಿಸರದಲ್ಲಿಯೇ ಬೆಳೆದ ಪ್ರೊ. ರಾಮೇಶ್ವರಿ ವರ್ಮ ಅವರು ಶೈಕ್ಷಣಿಕ, ರಂಗಭೂಮಿ, ಮತ್ತು ದೃಶ್ಯ ಮಾಧ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ವೈಯಕ್ತಿಕ ಜೀವನದಲ್ಲಿ ಕ್ರಾಂತಿಕಾರಕ ನಿರ್ಧಾರವನ್ನು ಕೈಗೊಂಡರೆ ಸಾರ್ವಜನಿಕ ಜೀವನದಲ್ಲಿ ಸ್ನೇಹ, ವಿಶ್ವಾಸ, ಹಾಗೂ ಸಂಬಂಧಗಳನ್ನು ಕಾಪಾಡಿಕೊಳ್ಳಬಹುದು ಎಂಬ ನಿಲುವನ್ನು ತಳೆದವರು.
ಜಾತಿ , ಸ್ವಜನ ಪಕ್ಷಪಾತ, ರಾಜಕೀಯದಿಂದ ತುಂಬಿರುವ ವಿಶ್ವವಿದ್ಯಾಲಯದ ವಾತಾವರಣದಲ್ಲಿ ಪ್ರಾಧ್ಯಾಪಕಿಯಾಗಿಯೂ ತಮ್ಮ ತನವನ್ನು ಉಳಿಸಿಕೊಂಡವರು. ರಾಮೇಶ್ವರಿ ವರ್ಮ ಅವರಿಗೆ ಗೌರವ ಸಮರ್ಪಣೆಯಾಗಿ ’ಅಂತರಂಗ ಅನುಸಂಧಾನ’ ಕೃತಿಯನ್ನು ಡಾ. ಹೇಮಲತ ಎಚ್.ಎಂ ಮತ್ತು ಡಾ. ಚಂದ್ರಮತಿ ಸೋಂದಾ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ.
©2025 Book Brahma Private Limited.