ನೆರೆದ ಜನ ಹರಿದು ಹೋಗುವಂತೆ ಸಮ್ಮೇಳನ ಎರಡು ಮೂರು ದಿನಗಳ ಕಾಲ ವಿಜೃಂಭಿಸಿ ಜನ ಮಾನಸದಲ್ಲಿ ತನ್ನ ಮುದ್ರೆಯನ್ನು ಒತ್ತಿ ಮರೆಯಾಗುತ್ತದೆ. ನಂತರ ಸಮ್ಮೇಳನ ಯವಾಗ ನಡೆಯಿತು, ಎಲ್ಲಿ ನಡೆಯಿತು, ಎಂಬ ಸಂಗತಿಗಳ ಜೊತೆಗೆ ರಾಜ್ಯ ಹಾಗೂ ಜಿಲ್ಲೆಯ ಮಾಹಿತಿಗಳು ಹಾಗೂ ಕನ್ನಡದ ಸಂಗತಿಗಳು ದಾಖಲೆಯಾಗಲಿ ಎಂಬ ದೃಷ್ಟಿಯಿಂದ ಸ್ಮರಣ ಗ್ರಂಥ ರೂಪುಗೊಳ್ಳುತ್ತದೆ. ಅಂಥ ಸ್ಮರಣ ಗ್ರಂಥ 'ಗಿರಿಯ ಸಿರಿ' ಯಾದಗಿರಿ ಜಿಲ್ಲೆಯ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 24-25 ಡಿಸೆಂಬರ್ 2018ರಂದು ನೆರವೇರಿದ ಸವಿನೆನಪಿಗಾಗಿ ಹೊರ ತಂದ ಗ್ರಂಥವಿದು.
©2025 Book Brahma Private Limited.