ವೆಂಕಟರಾಮ್ ಅವರು ಅಪ್ಪಟ ಸಮಾಜವಾದಿ. ನಡೆ ನುಡಿಯಲ್ಲಿ ಅಂತರವಿಲ್ಲದ ವ್ಯಕ್ತಿತ್ವ. ದುಡಿವವರ, ದಲಿತರ, ಬಡವರ ಬಗೆಗೆ ಅವರು ಹೊಂದಿದ್ದ ಕಾಳಜಿ ಪ್ರಶ್ನಾತೀತ. ಸಮಾಜದ ಅಪಮಾನಿತರು ಮತ್ತು ಕಡೆಗಣಿಸಲ್ಪಟ್ಟ ಜನರ ಜಾಗೃತಿಗಾಗಿ ಅವರು ಜೀವನ ಪರ್ಯಂತ ದುಡಿದವರು. ಹೋರಾಟಗಾರರೂ ಆಗಿದ್ದ ಅವರಲ್ಲಿ ಒಬ್ಬ ಸ್ಥಿತಪ್ರಜ್ಞನೂ ಇದ್ದ ಎನ್ನುತ್ತಾರೆ ಖ್ಯಾತ ಲೇಖಕ, ಸಾಹಿತಿ ಡಾ.ಸಿದ್ದಲಿಂಗಯ್ಯ.
ವೆಂಕಟರಾಮ್ ಅವರ ಅಧ್ಯಯನದ ವ್ಯಾಪ್ತಿ ದೊಡ್ಡದು. ಅವರು ಯಾವುದೇ ವಿಚಾರವನ್ನು ಸಮಯೋಚಿತ ದೃಷ್ಟಿಯಿಂದ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದರು. ತಮ್ಮ ಲೌಕಿಕ ಪರಿಜ್ಞಾನವನ್ನು ಸಮಾಜದ ಹಿತಕ್ಕಾಗಿ ಬಳಸಿದ ಅಪೂರ್ವ ವ್ಯಕ್ತಿ. ಅವರು ಒಬ್ಬ ಅತ್ಯುತ್ತಮ ಲೇಖಕರಾಗಿದ್ದರು ಎನ್ನುವುದಕ್ಕೆ ಅವರ ಬದುಕು ಮತ್ತು ಚಿಂತನೆ ಸ್ಪೂರ್ತಿಯಾಗಿವೆ. ಪರಿಶ್ರಮ ವೆಂಕಟರಾಮ್ ಅವರ ಅತ್ಯುತ್ತಮ ಕೃತಿಯಾಗಿದ್ದು, ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ. ವೆಂಕಟರಾಮ್ ಅವರು ವಿಷಯಗಳನ್ನು ನೋಡುವ ಕ್ರಮ, ಅವರ ಬುದ್ಧಿ ಮತ್ತು ಅವರಿಗಿದ್ದ ಮಾನವೀಯತೆಯ ಗಾಢ ಅರಿವಿನ ಬಗ್ಗೆ ”ಪರಿಶ್ರಮ’ ಕೃತಿ ಒಳನೋಟ ಒದಗಿಸುತ್ತದೆ.
©2024 Book Brahma Private Limited.