ಗೀತಾ ಕುಲಕರ್ಣಿ ಅವರು ಕನ್ನಡ ನವೋದಯ - ಪ್ರಗತಿಶೀಲ ಸಾಹಿತ್ಯ ಸಂದರ್ಭದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಲೇಖಕಿ. ಕಥೆ, ಕಾದಂಬರಿ ಶಿಶುಸಾಹಿತ್ಯ, ಜಾನಪದ, ಪ್ರಬಂಧ, ನಾಟಕ, ಜೀವನ ಚರಿತ್ರೆ, ಪ್ರವಾಸ ಕಥನಗಳ ಮೂಲಕ ಕನ್ನಡ ವಾಙ್ಮಯ ಸಮೃದ್ಧಗೊಳಿಸಿದ ಗೀತಾ ಕುಲಕರ್ಣಿ ಅವರ ಗೌರವಾರ್ಥ ಪ್ರಕಟಿಸಲಾಗಿರುವ ಕೃತಿಯನ್ನು ಮತ್ತೊಬ್ಬ ಪ್ರಮುಖ ಲೇಖಕಿ ಮಾಲತಿ ಪಟ್ಟಣಶೆಟ್ಟಿ ಸಂಪಾದಿಸಿದ್ದಾರೆ. ಇದೊಂದು ಪರಾಮರ್ಶನ ಗ್ರಂಥವೂ ಹೌದು.
ಆರು ಭಾಗಗಳಾಗಿರುವ ಕೃತಿಯ ಒಂದೊಂದು ಭಾಗವನ್ನು ಭಾವಾಂಜಲಿ, ಕಾವ್ಯಾಂಜಲಿ, ಪುಷ್ಪಾಂಜಲಿ ಎಂದು ಹೆಸರಿಸಲಾಗಿದೆ. ಗ್ರಂಥದಲ್ಲಿ ಒಟ್ಟು ಎಂಬತ್ತೊಂಬತ್ತು ಲೇಖನಗಳಿವೆ.
©2025 Book Brahma Private Limited.