ಲೇಖಕ ಆರ್,ಜಿ.ಹಳ್ಳಿ ನಾಗರಾಜ್ ಅವರ ಸಂಪಾದಿತ ಕೃತಿ ‘ರಾಷ್ಟ್ರಕವಿ. ರಾಷ್ಟ್ರಕವಿಗಳ ಕುರಿತಾದ ಈ ಕೃತಿ ಕನ್ನಡ ಸಾಹಿತ್ಯಲೋಕದ ಒಂದು ಹೊಸ ಅನ್ವೇಷಣೆ ಎನ್ನಬಹುದು. ನಮ್ಮ ನಾಡಿಗೆ ಮೂವರು ರಾಷ್ಟ್ರಕವಿಗಳು ಆಗಿಹೋಗಿದಾರೆ. ಮೊದಲನೆಯವರು ಮಂಜೇಶ್ವರದ ಗೋವಿಂದ ಪೈಗಳು, ಎರಡನೆಯವರು ಕುವೆಂಪು. ಮೂರನೆಯವರು ಡಾ.ಜಿ.ಎಸ್. ಶಿವರುದ್ರಪ್ಪ. ಈ ಸಂತೋಷವನ್ನು ಜನಸಾಮಾನ್ಯರೆಲ್ಲರಿಗೂ ತಲುಪಿಸುವ ಉದ್ದೇಶ ವಾದ ಈ ಮೂವರು ಹಿರಿಯ ಕವಿಗಳ ಬಗ್ಗೆ ರಚಿತವಾದ ಬೇರೆ ಬೇರೆಯ ಲೇಖನಗಳನ್ನು ಆರಿಸಿ, ಆ ಕವಿಗಳ ಬಗ್ಗೆ ಅವರ ಅಭಿಮಾನಿಗಳು ರಚಿಸಿರುವ ಕವನಗಳನ್ನೂ ಪರಿಕಲ್ಪಿಸಿ ಒಂದು ಉತ್ತಮ ಪ್ರಕಟನೆಯನ್ನು ಹೊರತಂದಿದ್ದಾರೆ.
©2024 Book Brahma Private Limited.