ಬೆಸಗರಹಳ್ಳಿ ರಾಮಣ್ಣ ಸೃಜನಶೀಲ ಮನಸ್ಸುಗಳು ಬದುಕನ್ನು ಸಹ್ಯವಾಗಿಸಬಲ್ಲವು ಎನ್ನುವ ನಂಬಿಕೆಯಿಂದ ಬರೆಯುತ್ತಾ ಬದುಕಿದವರು. ತಮ್ಮ ಕಥೆಗಳಲ್ಲಿ ನೈತಿಕ ಪ್ರಜ್ಞೆಯೊಂದರ ತಡಕಾಟದಲ್ಲಿದ್ದಂತೆ ತಮ್ಮ ಬದುಕಿನಲ್ಲೂ ಇದ್ದರು. ನಮ್ಮ ಗ್ರಾಮೀಣ ಅಂತಃಶಕ್ತಿಯು ಕುಸಿದು ಬೀಳುತ್ತಿರುವುದರ ಬಗ್ಗೆ ವ್ಯಾಕುಲಗೊಂಡಿದ್ದರು. ಆದರೆ ಮನುಷ್ಯನೊಳಗಿರುವ ಯಾವುದೋ 'ಒಳ್ಳೆಯದೊಂದರ ಬಗ್ಗೆ ಅಪಾರ ನಂಬಿಕೆವುಳ್ಳವರಾಗಿದ್ದರು. ಈ ಒಳ್ಳೆಯದೇ ಬದುಕನ್ನು ಕಾಯುತ್ತದೆ ಎಂದು ನಂಬಿದ್ದರು. ಈ ನಂಬಿಕೆಯಿಂದಲೇ ತಮ್ಮ ಜತೆಗಿದ್ದವರನ್ನು ಭೇದವೆಣಿಸದೆ ಪ್ರೀತಿ ಪ್ರೇಮಗಳಿಂದ ಕಾಣುತಿದ್ದರು. ಅವರ ಸ್ನೇಹ ಪ್ರೀತಿಗಳ ಬಗ್ಗೆ ದಂತಕತೆಯಂತಹ ಮಾತುಗಳಿವೆ. ಅಂತಹ ರಾಮಣ್ಣರವರ ಬದುಕಿನ ಬಗೆಯನ್ನು ಹಿಡಿದಿಡುವ ಪ್ರಯತ್ನವೇ ಈ ಕೃತಿ.
©2025 Book Brahma Private Limited.