ಪಂಜೆ ಮಂಗೇಶರಾಯರು ಮರಣ ಹೊಂದಿದ 14 ವರುಷಗಳ ತರುವಾಯ ಅವರ ನೆನಪಿನಲ್ಲಿ ಸಾಕಾರಗೊಂಡಿದ್ದೇ ಈ ಕೃತಿ-ಪಂಜೆಯವರ ನೆನೆಪಿಗಾಗಿ. ರಾಷ್ಟ್ರಕವಿ ಎಂ. ಗೋವಿಂದ ಪೈ, ವಿ.ಸೀತಾರಾಮಯ್ಯ ಹಾಗೂ ಶಿವರಾಮ ಕಾರಂತ ಅವರ ಸಂಪಾದಕತ್ವದಡಿ ಕೃತಿ ಪ್ರಕಟಗೊಂಡಿದೆ.
ಇಡೀ ಗ್ರಂಥವನ್ನು ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸಿದ್ದು, ಮೊದಲನೆಯದಾಗಿ ಪಂಜೆ ಅವರು ಕುಟುಂಬದ ಸದಸ್ಯರು, ಸಂಬಂಧಿಕರು, ಮಿತ್ರರು ಬರೆದ ಮಾತುಗಳು, ಎರಡನೆಯದರಲ್ಲಿ ಸ್ವತಃ ಪಂಜೆ ಅವರೇ ಬರೆದ ಲೇಖನಗಳು, ವಿವಿಧ ಪ್ರತಿಕೆಗಳಲ್ಲಿ ಪ್ರಕಟಿತ ಲೇಖನಗಳು, ಮೂರನೆಯದರಲ್ಲಿ- ನಾಡಿನ ವಿವಿಧೆಡೆಯಿಂದ ಅಭಿಮಾನಿ ಸಾಹಿತ್ಯಾಸಕ್ತರು ಬರೆದ ಲೇಖನಗಳು ಇವೆ. ಪಂಜೆ ಅವರ ಹಾಗೂ ಅವರ ಸಂಬಂಧಿರೊಂದಿಗೆ ಇರುವ ವಿರಳ ಭಾವಚಿತ್ರಗಳು, ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮಾಡಿದ ಭಾಷಣ ಹೀಗೆ ಎಲ್ಲವನ್ನೂ ಈ ಕೃತಿ ಒಳಗೊಂಡಿದೆ.
©2024 Book Brahma Private Limited.