ಈ ಕೃತಿಯಲ್ಲಿ ಭಾರತೀಯ ಸ್ತ್ರೀವಾದ ನಿರ್ವಚನದಲ್ಲಿ ಸಂಸ್ಕೃತಿ ಚಿಂತನೆಯ ಪಾತ್ರ ಯಾವ ಬಗೆಯದು, ಅದರ ಪರಿಣಾಮವಾಗಿ ರೂಪುಗೊಂಡ ಭಾರತೀಯ ಸ್ತ್ರೀವಾದದ ಸ್ವರೂಪವೇನು ಇತ್ಯಾದಿ ಅಂಶಗಳನ್ನು ಚರ್ಚಿಸಲಾಗಿದ್ದು, ಭಾರತೀಯ ಸಮಾಜದ ಏಕತೆಯನ್ನು. ಪ್ರತಿಪಾದಿಸ ಹೊರಾಟ ಹಾಗು ಬಹುಮುಖೀ ಗುಣವನ್ನು ಶೋಧಿಸ ಹೊರಟ ಸಂಸ್ಕೃತಿ ಹಾಗು ಪ್ರತಿಸಂಸ್ಕೃತಿ ಚಿಂತನೆಯ ಸಂದರ್ಭಗಳೆರಡೂ ಸ್ತ್ರೀವಾದದ ಸಂದರ್ಭದಲ್ಲಿ ಮಾತ್ರ ಒಂದೇ ಬಗೆಯ ನಿಲುವನ್ನು ತಾಳುವುದರ ಮೂಲಕ ಹೆಚ್ಚು ವ್ಯತ್ಯಾಸವಿಲ್ಲದೆ ಭಾರತೀಯ ಸ್ತ್ರೀವಾದವನ್ನು ನಿಯಂತ್ರಿಸಲು ಪ್ರಯತ್ನಿಸಿವೆ ಎಂಬುದರ ಬಗ್ಗೆ ಈ ಕೃತಿ ಬೆಳಕು ಚೆಲ್ಲುತ್ತದೆ.
©2024 Book Brahma Private Limited.