ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಇದು ಇತ್ತೀಚೆಗೆ ಸಾರ್ವಜನಿಕ ಚರ್ಚೆಯ ರೂಪವನ್ನು ಪಡೆದಿದೆ. ಈ ಚರ್ಚೆಯ ಭರದಲ್ಲಿ ಕುಟುಂಬದೊಳಗೆ ಮಹಿಳೆಯರು ಬೇರೆ ಬೇರೆ ರೂಪಗಳಲ್ಲಿ ಎದುರಿಸುತ್ತಿರುವ ದೌರ್ಜನ್ಯ, ಶೋಷಣೆಗಳು ಬದಿಗೆ ಸರಿದಿವೆ. ಮಹಿಳೆಯ ಮೇಲಿನ ದೌರ್ಜನ್ಯದ ಮೇಲ್ಮುಖ ಚರ್ಚೆಗಳು ನಡೆಯುತ್ತವೆಯೇ ಹೊರತು, ಅದರ ತಾಯಿ ಬೇರನ್ನು ಗುರುತಿಸಿ ನಿವಾರಿಸುವ ಕೆಲಸ ನಡೆಯುತ್ತಿಲ್ಲ. ಈ ಕೃತಿ ಮಹಿಳೆಯ ಮೇಲೆ ಬೇರೆ ಬೇರೆ ಕ್ಷೇತ್ರಗಳಲ್ಲಿ, ಸಂದರ್ಭಗಳಲ್ಲಿ ನಡೆಯುವ ದೌರ್ಜನ್ಯಗಳನ್ನು ಅಧ್ಯಯನಾತ್ಮಕವಾಗಿ ವಿಶ್ಲೇಷಿಸುತ್ತದೆ. ಅಸಮಾನತೆಯ ಮೂಲವನ್ನು ಹುಡುಕಿಕೊಂಡು ಹೋಗುವ ಕೃತಿ, ಹೆಣ್ಣಿನ ಮೂಲಕ ಜೀವ ಪಡೆದ ಇತಿಹಾಸದ ಬೇರುಗಳನ್ನು ಅರಸಿಕೊಂಡು ಹೋಗುತ್ತದೆ. ಈಜಿಪ್ ಟಿನಿಂದ ಹಿಡಿದು, ಪಾಕಿಸ್ತಾನದ ಮಾಂಟೆಗೊಮರಿ, ಗ್ರೀಕ್ ನಾಗರಿಕತೆ, ರೋಮನ್ ನಾಗರಿಕತೆ ಹೀಗೆ ಬೇರೆ ಬೇರೆ ಪ್ರದೇಶಗಳಲ್ಲಿ ಮಹಿಳೆಯ ಅಸಮಾನತೆ ರೂಪು ಪಡೆದದ್ದು ಮತ್ತು ಅಂದು ಒಂದೇ ಧಾರೆಯಾಗಿ ಕೂಡಿಕೊಂಡ ಕತೆಯನ್ನು ಇತಿಹಾಸದ ದಾಖಲೆಗಳ ಜೊತೆಗೆ ಇಡುತ್ತದೆ. ಈ ಕೃತಿ, ಮಹಿಳೆಯ ಮೇಲಿನ ದೌರ್ಜನ್ಯಗಳನ್ನು ಬೇರೆ ಬೇರೆ ಧರ್ಮಗಳು ಕಂಡ ರೀತಿ, ಬೇರೆ ಬೇರೆ ದೇಶಗಳ ಕಾನೂನುಗಳು ಕಂಡ ರೀತಿಗಳು ಇಲ್ಲಿ ಚರ್ಚೆಗೊಳಗಾಗುತ್ತವೆ. ಹಾಗೆಯೇ ಬೇರೆ ಬೇರೆ ದೇಶಗಳಲ್ಲಿ ಮಹಿಳಾ ಚಳವಳಿ ಹೇಗೆ ಬೆಳೆಯಿತು ಎಂಬುದರ ಕುರಿತು ವಿವರಗಳನ್ನು ಈ ಕೃತಿಯೂ ವಿವರಿಸುತ್ತದೆ.
©2025 Book Brahma Private Limited.