ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸಂವೇದನೆಗಳು ಸ್ವಾತಂತ್ರ್ಯ, ಸಮಾನತೆ, ವ್ಯಕ್ತಿಗತ ಭಾವನೆ ಇವುಗಳ ಕುರಿತಂತೆ ವಿಫುಲವಾದ ಸಾಹಿತ್ಯ ಸೃಷ್ಟಿ ಆಗದಿದ್ದರೂ ಕೆಲವು ಶತಮಾನಗಳಿಂದೀಚೆಗೆ ಅಲ್ಲಲ್ಲಿ ಮಹಿಳಾ ಪಾತ್ರಗಳು ಮಹಿಳೆಯರ ಸಮಾಜದೊಳಗಿನ ವಿನ್ಯಾಸಗಳ ಹಾಗೂ ಸಂಸ್ಕೃತಿಯೊಳಹುಗಳಲ್ಲಿ ನಿಷ್ಠವಾದ ಮಹಿಳೆಗೆ ಒದಗುವ ಸಂದರ್ಭಗಳನ್ನು ಸಾಹಿತ್ಯ ಕೃಷಿಗೆ ಸೇರಿಸುವ ಪ್ರಯತ್ನ ಕೆಲವು ಕಡೆ ನಡೆದಿದೆ.
ಅಂತೆಯೇ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸ್ತ್ರೀಯ ಪಾತ್ರಾಭಿವ್ಯಕ್ತಿಗಳು ವಿರಳವಾಗಿದ್ದರೂ ಕೆಲವು ಕವಿಗಳು ಅಲ್ಲಲ್ಲಿ ಚಿತ್ರಿಸಿದ್ದಾರೆ. ಅದರ ಜೊತೆಗೆ ಶುದ್ಧ ಸಾಹಿತ್ಯಿಕ ಕಾರಣಗಳಿಗಾಗಿ ಮಾತ್ರವಲ್ಲದೆ, ನಡುಗನ್ನಡ ಸಾಹಿತ್ಯ ಮತ್ತು ಸ್ತ್ರೀ ಪಾತ್ರಗಳ ನೆಲೆಯ ಅನೇಕ ಕಾರಣಗಳಿಗಾಗಿಯೂ ಬಹುಮುಖ್ಯವಾಗಿರುವ ’ಮಧ್ಯಕಾಲೀನ ಸಾಹಿತ್ಯದಲ್ಲಿ ಸ್ತ್ರೀ ಪಾತ್ರಾಭಿವ್ಯಕ್ತಿ’ ಕೃತಿಯನ್ನು ಡಾ.ಕೆ.ಎಲ್. ದಿವ್ಯ ಅವರು ರಚಿಸಿದ್ದಾರೆ.
©2025 Book Brahma Private Limited.