ಮಾನವನ ಬದುಕಿನಲ್ಲಿ ಕ್ರೀಡೆ ಹಾಸುಹೊಕ್ಕಾಗಿದೆ. ಕ್ರೀಡೆ ಎಂಬುವುದು ಪುರುಷರಿಗೆ ಮಾತ್ರ ಸೀಮಿತವಲ್ಲ. ಕ್ರೀಡಾಲೋಕದಲ್ಲಿ ಪುರುಷರಷ್ಟೇ ಮಹಿಳೆಯರು ಉತ್ತಮ ಸಾಧನೆ ಮಾಡಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ಅವರ ಸಾಧನೆ ಅನನ್ಯವಾದುದು.
ಪಿ.ಟಿ. ಉಷಾ, ಕರ್ಣಂ ಮಲ್ಲೇಶ್ವರಿ, ಮೇರಿಕೋಮ್, ಅಶ್ವಿನಿ ನಾಚಪ್ಪ, ಹಿಮಾ ದಾಸ್, ಸೈನಾ ನೆಹ್ವಾಲ್, ಪಿ.ವಿ. ಸಿಂಧು ಅವರಂತಹ ಶ್ರೇ಼ಷ್ಠ ಸಾಧನೆ ಮಾಡಿದ ಮಹಿಳೆಯರ ಬದುಕಿನ ಹಿನ್ನೆಲೆ ಕೃತಿಯಲ್ಲಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ದೇಶ ವಿದೇಶಿ ಮಹಿಳೆಯರ ಸಾಧನೆಯ ಕುರಿತು, ಅವರ ಬದುಕಿನ ಬಗ್ಗೆಯೂ ವಿವರಿಸಲಾಗಿದೆ.
©2025 Book Brahma Private Limited.