‘ಮಹಿಳಾ ಚಳುವಳಿಯ ಮಜಲುಗಳು’ ನವಕರ್ನಾಟಕದ ಸುವರ್ಣೋತ್ಸವ ಮಾಲಿಕೆಯಡಿ ಪ್ರಕಟಿಸಿದ ಕೃತಿ. ಹಿರಿಯ ಲೇಖಕ ಜಿ. ರಾಮಕೃಷ್ಣ ಪ್ರಧಾನ ಸಂಪಾದಕರು. ಎನ್. ಗಾಯತ್ರಿ ಸಂಪಾದಕಿ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಭಾರತದ ಸ್ವಾತಂತ್ಯ್ರ ಚಳುವಳಿಯ ಒಡಲಲ್ಲಿ ಜನಿಸಿದ ಮಹಿಳಾ ಚಳುವಳಿಗೆ ಸುಮಾರು ಒಂದು ಶತಮಾನದ ದೀರ್ಘ ಇತಿಹಾಸವಿದೆ. ವಸಾಹತುಶಾಹಿಯ ವಿರುದ್ಧದ ಹೋರಾಟದಲ್ಲಿ ಹುಟ್ಟಿದ ಮಹಿಳಾ ಚಳುವಳಿ ನವ ವಸಾಹತುಶಾಹಿಯ ಯುಗದವರೆಗೂ ಹಾದು ಬಂದ ವಿವಿಧ ಮಜಲುಗಳ ಸ್ಥೂಲ ಪರಿಚಯ ಇಲ್ಲಿದೆ. ಚರಿತ್ರೆಯಲ್ಲಿ ದಾಖಲಾಗಿರುವ ಹೆಣ್ಣಿನ ಜೀವನ ಮತ್ತು ಬದುಕನ್ನು ಹಾಗೂ ಅವಳು ನಿರ್ವಹಿಸಿದ, ಭಾಗವಹಿಸಿದ ಚಳುವಳಿಯನ್ನು ಸ್ತ್ರೀವಾದಿ ನೆಲೆಯಿಂದ ನೋಡುವ ಪ್ರಯತ್ನ ಇಲ್ಲಿಯದು. ಪುರುಷ ನೇತೃತ್ವದ ಸಾಮಾಜಿಕ ಚಳುವಳಿಗಳಾದ ಗಾಂಧಿ ಚಳುವಳಿ, ಗ್ರಾಮೀಣ ಚಳುವಳಿಗಳಾದ ತೇಭಾಗ, ತೆಲಂಗಾಣ, ಪುನ್ನಪ್ರ, ವಯಲಾರ್ ದ್ರಾವಿಡ ಚಳುವಳಿಗಳಲ್ಲಿ ಮಹಿಳೆಯ ಪಾತ್ರದ ಸೋಲು-ಗೆಲುವುಗಳನ್ನು ಕುರಿತ ಚರ್ಚೆ ಈ ಕೃತಿಯು ಒಳಗೊಂಡಿದೆ.
©2025 Book Brahma Private Limited.