ಮಹಿಳಾ ಹೋರಾಟದ ಎಲ್ಲೆಗಳನ್ನು ವಿಸ್ತರಿಸುವಂತೆ ಇರುವ ಕೃತಿ ಹಿರಿಯ ಕವಯತ್ರಿ, ಚಿಂತಕಿ ಡಾ. ಎಚ್. ಎಸ್. ಅನುಪಮಾ ಅವರು ಬರೆದ ’ಮಹಿಳೆ- ದಲಿತ ಮತ್ತು ರಾಜಕೀಯ ಪ್ರಜ್ಞೆ’ ಕೃತಿ. ಮಹಿಳಾ ಚಳವಳಿಗೆ ಬೇಕಾಗಿರುವ ಸಮತೋಲನ, ತಾತ್ವಿಕತೆ, ಅದು ವಿಸ್ತರಿಸಿಕೊಳ್ಳಬೇಕಾದ ಬಗೆಗಳನ್ನು ಲೇಖಕಿ ಜತನದಿಂದ ವಿವರಿಸಿದ್ದಾರೆ. ಇದಕ್ಕಾಗಿ ಅವರು ಬಳಸಿರುವುದು ರೂಪಕಗಳ ಭಾಷೆ.
ಮಹಿಳೆಯ ವರ್ತಮಾನ, ಭೂತ ಮತ್ತು ಭವಿಷ್ಯವನ್ನು ಚರ್ಚಿಸಲು ವಿವಿಧ ವ್ಯಕ್ತಿಗಳು ಮತ್ತು ಪ್ರಕರಣಗಳನ್ನು ಸಾಧನವಾಗಿ ಪರಿಗಣಿಸಲಾಗಿದೆ. ಕರಾವಳಿಯ ಜನಪದ ಗಾಯಕಿ ಸುಕ್ರಿ ಬೊಮ್ಮನೌಡ ಅವರಿಂದ ಹಿಡಿದು ರಾಣಿ ಚೆನ್ನಭೈರಾದೇವಿಯವರೆಗೆ, ಆಂಗ್ ಸಾನ್ ಸೂಕಿಯಿಂದ ಹಿಡಿದು ಏಂಜೆಲಾ ಡೆವಿಸ್ ವರೆಗೆ ಇಲ್ಲಿನ ಲೇಖನಗಳು ವಿಸ್ತರಿಸಿಕೊಂಡಿವೆ.
ಸ್ತ್ರೀವಾದಿ ಬರಹಗಳಾಚೆಗೆ, ಪುರುಷರನೂ ಜೊತೆ ಸೇರಿಸಿಕೊಂಡು ಅವರು ಇಲ್ಲಿ ಮಹಿಳೆಯನ್ನು ನಿರೂಪಿಸಿದ್ದಾರೆ. ಯಾವುದೇ ಅಧ್ಯಯನೀಯ ಶಿಸ್ತಿನಿಂದ ರೂಪುಗೊಂಡಿರುವ ಕೃತಿ ಇದಲ್ಲ. ಲೇಖಕಿಯೇ ಹೇಳುವಂತೆ ಕಾಲ, ಸಂದರ್ಭಕ್ಕೆ ತಕ್ಕಂತೆ ಬರೆದವುಗಳು.
©2024 Book Brahma Private Limited.