ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿರುವ ಜಯಶ್ರೀ ಬಿ. ಕದ್ರಿ ಅವರ ವೈಚಾರಿಕ ಬರಹಗಳ ಸಂಗ್ರಹ. ಸಾಹಿತ್ಯ, ಸಮಾಜ, ವಿಚಾರ ಹೀಗೆ ಬೇರೆ ಬೇರೆ ಮಗ್ಗುಲುಗಳಲ್ಲಿ ಬರಹಗಳು ಹೊರಳುತ್ತವೆ. ಈ ಕೃತಿಗೆ ವೈಚಾರಿಕ ಹಣೆಪಟ್ಟೆ ಅಷ್ಟು ಒಗ್ಗುವುದಿಲ್ಲ. ಯಾಕೆಂದರೆ ಇಲ್ಲಿರುವ ಲೇಖನಗಳು ಒಂದು ನಿರ್ದಿಷ್ಟ ಉದ್ದೇಶಗಳಿಂದ ಹುಟ್ಟಿದವುಗಳಲ್ಲ. ಲಾಲಿತ್ಯ ಬರಹಗಳ ಹೆಗ್ಗಳಿಕೆ. ಆದರೂ ವರ್ತಮಾನದ ಹತ್ತು ಹಲವು ವಿಷಯಗಳು ಕೃತಿಯಲ್ಲಿ ಚರ್ಚೆಗೊಳಗಾಗುತ್ತವೆ. ಇಲ್ಲಿ ಒಟ್ಟು 55 ಲೇಖನಗಳಿವೆ. ಹೆಚ್ಚಿನವುಗಳು ಮಹಿಳೆಯರ ಬದುಕು ಬವಣೆಗಳನ್ನು ಕೇಂದ್ರವಾಗಿಟ್ಟುಕೊಂಡು ರಚನೆಗೊಂಡಿವೆ. ಇದೇ ಸಂದರ್ಭದಲ್ಲಿ ಟೀನೇಜ್, ಫೇಸ್‌ಬುಕ್, ಸೈಬರ್ ಫೆಮಿನಿಸಂ, ಲಿಪ್‌ಸ್ಟಿಕ್, ಸೌಂದರ್ಯ ಲಹರಿ ಹೀಗೆ ದಿನ ನಿತ್ಯದ ಬದುಕಿನಲ್ಲಿ ಅವಿನಾಭಾವವಾಗಿರುವ ಹಲವು ಸಂಗತಿಗಳ ಕುರಿತು ಲೇಖಕರು ಇಲ್ಲಿ ಸರಳವಾಗಿ ನಿರೂಪಿಸುತ್ತಾರೆ. ಬಾಲ್ಯ, ಮದುವೆ ಮೊದಲಾದವುಗಳನ್ನು ಹೆಣ್ಣು ಕಣ್ಣುಗಳಲ್ಲಿ ನೋಡಿ ಇಲ್ಲಿ ಚರ್ಚಿಸುತ್ತಾರೆ.
©2025 Book Brahma Private Limited.