ನೈಜೀರಿಯಾದ ಲೇಖಕಿ ಚಿಮಮಾಂಡ ಅವರ 'ಫೆಮಿನಿಸ್ಟ್ ಮ್ಯಾನಿಫೆಸ್ಟೊ' ಕೃತಿಯಲ್ಲಿ ಮಗಳನ್ನು ಬೆಳೆಸಲು ಬೇಕಾದ 15 ಸಲಹೆಗಳಿವೆ. ಆದರೆ ಇದು ಸ್ತ್ರೀವಾದದ ಪ್ರನಾಳಿಕೆಯಂತೆಯೂ ಕಂಡುಬರುವುದು ಸೋಜಿಗ. ಸ್ತ್ರೀವಾದವು ನಮ್ಮೊಳಗೆ ಹಾಸುಕೊಕ್ಕಾಗಬೇಕಾದ ಕುರಿತು ವಿವರಿಸಿದ್ದಾರೆ. ಈ ಕೃತಿಯನ್ನು ಲೇಖಕಿ ಕಾವ್ಯಶ್ರೀ ಎಚ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ನೈಜೀರಿಯಾದ ಲೇಖಕಿ ಚಿಮಮಾಂಡ ಎನ್‌ಗೋಜಿ ಅಡಿಚಿಯೆ ಅವರ 'ಫೆಮಿನಿಸ್ಟ್ ಮ್ಯಾನಿಫೆಸ್ಟೋ' ಎನ್ನುವ ಪುಟ್ಟ ಪುಸ್ತಕದಲ್ಲಿ ಮಗಳನ್ನು ಬೆಳೆಸಲು 15 ಸಲಹೆಗಳಿವೆ. ಸ್ತ್ರೀವಾದದ ಅರ್ಥವನ್ನು ವಿಸ್ತರಿಸಿರುವ ಈ ಲೇಖಕಿ ನೀಡಿರುವ ಸಲಹೆಗಳನ್ನು ಹೆಣ್ಣು ಹೆತ್ತವರಷ್ಟೇ ಅಲ್ಲ, ಎಲ್ಲರೂ ಓದಬೇಕು. ಇದನ್ನು ಓದುವ ಮೂಲಕ ಗಂಡಸರು ತಮ್ಮ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಕನ್ನಡದ್ದೇ ಅನ್ನಿಸುವಷ್ಟು ಪರಿಣಾಮಕಾರಿಯಾಗಿ ಈ ಪುಸ್ತಕವನ್ನು ಡಾ.ಕಾವ್ಯಶ್ರೀ ಎಚ್. ಅನುವಾದಿಸಿದ್ದಾರೆ.
15 ಡಿಸೆಂಬರ್ 2019
ಕೃಪೆ : ವಿಜಯ ಕರ್ನಾಟಕ
©2024 Book Brahma Private Limited.