ಕನ್ನಡ ನಾಟಕದಲ್ಲಿನ ಸ್ತ್ರೀ ಪಾತ್ರಗಳ, ಸಂಬಂಧಿತ ಮೌಲ್ಯಗಳ ಬಗ್ಗೆ ಪ್ರಸ್ತಾಪಿಸದೇ ಉಳಿದು ಹೋದಂತಹ ಅಂಶಗಳ ಬಗ್ಗೆ ಗಹನವಾಗಿ ಯೋಚಿಸಿ ಹೊರತಂದಿರುವ ಅಪೂರ್ವ ಕೃತಿ 'ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ'. ಕನ್ನಡ ನಾಟಕಗಳಲ್ಲಿನ ಪ್ರಾತಿನಿಧಿಕ ಸ್ತ್ರೀ ಪಾತ್ರಗಳ ವಿವರಣೆ, ಮತ್ತು ವಿಶ್ಲೇಷಣೆಯನ್ನು ಅವಲೋಕಿಸಿರುವಂತಹ ಅಧ್ಯಯನ ಇದು.
ಸ್ತ್ರೀವಾದದ ಹಿನ್ನೆಲೆಯಲ್ಲಿ ಕಂಡುಬಂದ ಪ್ರಾರಂಭದ ನಾಟಕಗಳಿಂದ ಹಿಡಿದು ಆಧುನಿಕ ಕನ್ನಡ ನಾಟಕಗಳ ವಿಮರ್ಶೆಯ ತನಕವೂ ಗಂಭೀರವಾಗಿ ಅಧ್ಯಯನ ನಡೆಸಿ, ಕನ್ನಡದ ಎಲ್ಲಾ ನಾಟಕಕಾರರ ಮತ್ತು ಪ್ರಮುಖ ಬರಹಗಾರರ ಲೇಖನಗಳನ್ನು ಸ್ತ್ರೀ ಪ್ರಪಂಚಕ್ಕೆ ಮುಖಾಮುಖಿಯಾಗಿಸಿದ್ದಾರೆ ಲೇಖಕಿ ಹೇಮಾ ಪಟ್ಟಣಶೆಟ್ಟಿ.
©2025 Book Brahma Private Limited.