ಸ್ತ್ರೀಯರ ಕುರಿತಾದ ಚರ್ಚೆ, ಅಂಶಗಳು ಬಹು ಹಿಂದಿನಿಂದಲೇ ಇರುವಂತದ್ದು. ಸ್ತ್ರೀತ್ವದ ಅಂಶವು ಒಂದು ರೀತಿಯ ವಾದವಾಗಿ, ಕ್ರಿಯಾತ್ಮಕವಾದ ತಿಳುವಳಿಕೆಯ ಭಾಗವಾಗಿ,ಈಚೆಗೆ ಹಲವಾರು ಚರ್ಚೆಗಳು ನಡೆದುಬಂದಿವೆ.
ಸ್ತ್ರೀ ಸಂವೇದನೆಯೆಂದರೆ ಸಾಮಾಜಿಕ, ಆರ್ಥಿಕ, ಹಾಗೂ ಸಾಂಸ್ಕೃತಿಕ ಸಂಗತಿಗಳ ಸ್ವರೂಪವಾಗಿದೆ. ಸ್ತ್ರೀ ಸಂವೇದನೆಯು ಒಂದು ರೀತಿಯ ಸಂದರ್ಭಗಳಲ್ಲಿ ಕೇವಲ ಭಾವನಾತ್ಮಕವಾದ ಪ್ರಕ್ರಿಯೆಂದು ಭಾವಿಸಲಾಗದು. ಇವುಗಳ ಹಿನ್ನೆಲೆಯಲ್ಲಿ’ಸ್ತ್ರೀವಾದಿ ಪರಿಕಲ್ಪನೆಗಳು’ ಕೃತಿಯು ಬಹಳ ಅಗತ್ಯವಾದ ಅಧ್ಯಯನ ಸಾಮಗ್ರಿಯಾಗಿದೆ.
ಅಗ್ನಿ ಕಾರ್‍ಯ ಮತ್ತು ಸ್ತ್ರೀಯರು, ಅಧಿಪತ್ಯ ಮತ್ತು ಶರಣಾಗತಿ, ಅಡುಗೆ ಮನೆ ಸಾಹಿತ್ಯ, ಅಭಿಸಾರಿಕೆ, ಅನಿಶ್ಚಿತ ಸಿದ್ದಾಂತಗಳು, ಅಶ್ವಮೇಧ ಮತ್ತು ಸ್ತ್ರೀಯರು, ಅಪಹರಣ ವಿವಾಹದಲ್ಲಿ ಸ್ತ್ರೀಯರ ಪ್ರಶ್ನೆ, ಅನೈತಿಕ ಸಂಬಂಧಗಳು ಮತ್ತು ಸ್ತ್ರೀ, ಅಂತರಾಷ್ಟ್ರೀಯತೆ- ಮಹಿಳಾ ಅಸ್ತಿತ್ವ, ಅಂತರ್ ಪಠ್ಯ ಮತ್ತು ಸ್ತ್ರೀವಾದಿ ಓದು, ಅಚಾರಿತ್ರಿಕ ವಿಧಾನ ಮತ್ತು ಸ್ತ್ರೀವಾದ ಋತುಸ್ನಾನ, ಋಗ್ವೇದದಲ್ಲಿನ ಸ್ತ್ರಿ ಒಂದು ಉಲ್ಲೇಖ, ಚರಿತ್ರೆಯ ನಿರ್ಮಾಣ ಮತ್ತು ಸ್ತ್ರೀ, ತಾಯ್ತನದ ಸಾಮಾಜೀಕರಣ, ಹೀಗೆ ಹಲವಾರು ಸೂಕ್ಷ್ಮ ಅಂಶಗಳ ವಿಷಯ ವಸ್ತುಗಳನ್ನು ಗ್ರಹಿಸಿ, ಚಿಂತಕರೂ, ಲೇಖಕರೂ ಆದ ಕೇಶವ ಶರ್ಮರು ಅಧ್ಯಯನ ನಡೆಸಿದ ಚಿಂತನೆಯ ಹಾದಿ ಈ ಕೃತಿಯಲ್ಲಿದೆ.
©2025 Book Brahma Private Limited.