‘ಮಹಿಳೆ ಬಿಡುಗಡೆಯ ಹಾದಿಯಲ್ಲಿ’ ಹೆಣ್ಣನ್ನು ಶಬ್ದಾಡಂಬರದಲ್ಲಿ ಆರಾಧಿಸಿ, ದೈವತ್ವಕ್ಕೆ ಏರಿಸಿ ಸ್ತುತಿಸಿದ ಸಂಸ್ಕೃತಿ ವಾಸ್ತವದಲ್ಲಿ ಅವಳಿಗೆ ಸಂಕೋಲೆಯನ್ನು ಬಿಗಿದು ದನಿಯೆತ್ತದಂತೆ ಮಾಡಿ ತುಳಿದಿಟ್ಟಿದೆ. ಸಮಾಜದ ಅರ್ಧ ಭಾಗವಾದ ಈ ಹೆಣ್ಣಿನ ಇಂದಿನ ದುಃಸ್ಥಿತಿಗೆ ಒಂದು ಚರಿತ್ರೆಯಿದೆ. ಚರಿತ್ರೆಯಲ್ಲಿ ಅವಳ ಸ್ಥಾನಮಾನಗಳಿಗೆ ಕಾರಣವಾದ ಅಂದಂದಿನ ಸಾಮಾಜಿಕ ಶಕ್ತಿಗಳ ಮತ್ತು ಅವುಗಳ ಬದಲಾವಣೆಯಿಂದುಂಟಾದ ಪರಿಣಾಮವನ್ನು ಕುರಿತು ಒಂದು ಕಿರು ನೋಟ ಇಲ್ಲಿದೆ.
ಹೆಣ್ಣಿನ ಸಮಸ್ಯೆಗಳ ಉಗಮ ಮತ್ತು ಅವುಗಳ ವಿವಿಧ ಸ್ವರೂಪವನ್ನು ಅಧ್ಯಯನ ಮಾಡುವ, ಈ ಸಮಸ್ಯೆಗಳಿಗೆ ಕಾರಣವಾದ ಶಕ್ತಿಗಳನ್ನು ಗುರುತಿಸಿ ಅವುಗಳ ವಿರುದ್ಧ ಹೋರಾಡಲು ಬೇಕಾದ ಸಿದ್ಧಾಂತವನ್ನು ಅನ್ವೇಷಿಸುವ ಪ್ರಯತ್ನ ಇದು. ಕೃಷ್ಣನಿಗೆ ಮೊರೆಯಿಟ್ಟ ದ್ರೌಪದಿಯಂತೆ, ರಾಮನಿಗೆ ಕಾಯುತ್ತಿದ್ದ ಅಹಲ್ಯೆಯಂತೆ ಇಂದು ಹೆಣ್ಣು ಯಾವ ಯುಗಪ್ರವರ್ತಕನಿಗೂ ಮೊರೆಯಿಡುವುದರಿಂದ ಪ್ರಯೋಜನವಿಲ್ಲ. ತನ್ನ ವಿಮೋಚನೆ ತನ್ನ ಕೈಯಲ್ಲಿಯೇ ಇದೆ ಎಂದು ಮನಗಂಡು ಸಂಘಟಿತ ಸ್ತ್ರೀ ಶಕ್ತಿಯನ್ನು ನೆಚ್ಚಿಕೊಳ್ಳಬೇಕು ಎಂಬ ಸಂದೇಶ ಈ ಕೃತಿ ಯುದ್ಧಕ್ಕೂ ಪ್ರತಿಧ್ವನಿಸುತ್ತದೆ.
©2025 Book Brahma Private Limited.