ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಗೆ ಭಾರತದ ಸಾಧಕಿಯರಲ್ಲಿಯೇ ಎತ್ತರದ ಸ್ಥಾನವಿದೆ. ಸ್ವಾತಂತ್ಯ್ರ ಹೋರಾಟ, ಸಮಾಜ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ೨೦ನೇ ಶತಮಾನದ ಮಾದರಿ ಹೆಣ್ಣು ಎನಸಿಕೊಂಡವರು ಅವರು. ಸ್ವಾತಂತ್ಯ್ರ ಹೋರಾಟದ ಪ್ರವಾಹಕ್ಕೆ ಮಹಿಳಾ ಧಾರೆಯನ್ನು ಸೇರಿಸಿದ ಕಮಲಾದೇವಿ ಆ ಮೂಲಕ ಸಾಮಾಜಿಕ ಪ್ರಗತಿ ಸಾಧಿಸಲು ಮುಂದಾದರು. ’ರಾಷ್ಟ್ರೀಯ ನಾಟಕ ಶಾಲೆ’ಯಂತಹ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ, ಹಲವು ಕರಕುಶಲ ವಸ್ತುಸಂಗ್ರಹಾಲಯಗಳನ್ನು ರೂಪಿಸುವಲ್ಲಿ ಕಮಲಾದೇವಿ ಅವರ ಶ್ರಮ ಅಪಾರವಾದುದಾಗಿತ್ತು.
ಅವರು ಭಾರತದ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಮಹಿಳೆಯರು ಪಾಲ್ಗೊಂಡ ಬಗ್ಗೆ 1983ರಲ್ಲಿ ’Indian Women's Battle for Freedom’ ಕೃತಿ ರಚಿಸಿದ್ದರು. ಸೌತ್ ಏಷ್ಯಾ ಬುಕ್ಸ್ ಅದನ್ನು ಪ್ರಕಟಿಸಿತ್ತು. ಕರ್ನಾಟಕದ ಕರಾವಳಿಯವರೇ ಆದ ಪ್ರಮುಖ ಲೇಖಕಿ ವೇದೇಹಿ ಅವರು”ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ’ ಹೆಸರಿನಲ್ಲಿ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ.
©2024 Book Brahma Private Limited.