ಭಾರತೀಯ ಹೆಣ್ಣುಮಕ್ಕಳ ಸ್ಥಿತಿಗತಿಯನ್ನು ಅಧ್ಯಯನ ಮಾಡುವ ’ಬೆಳ್ಳಿಯ ಸಂಕೋಲೆಗಳು’ ಭಾರತದ ಪ್ರಮುಖ ಸ್ತ್ರೀವಾದಿ ಮೈತ್ರೇಯಿ ಮುಖ್ಯೋಪಾಧ್ಯಾಯರ ಕೃತಿಯೊಂದನ್ನು ಆಧರಿಸಿದ್ದು. ಭಾರತದ ಬೇರೆ ಬೇರೆ ಭಾಷಿಕ ಪ್ರದೇಶಗಳಲ್ಲಿ ಸ್ತ್ರೀವಾದಿ ಚಿಂತನೆಗಳಿಗೆ ದೊರೆತ ಸ್ಥಳೀಯ ಸ್ಪರ್ಶವನ್ನು ಕೃತಿ ಪರಾಮರ್ಶಿಸುತ್ತದೆ.
ಮಹಿಳಾ ಸಮಸ್ಯೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದ್ದರೂ ಅವು ಬೀರುವ ಪರಿಣಾಮ ಮಾತ್ರ ಒಂದೇ ಆಗಿರುತ್ತದೆ ಎನ್ನುವ ಜಿಜ್ಞಾಸೆ ಮಹಿಳಾ ಅಧ್ಯಯನಕ್ಕೆ ನಾಂದಿ ಹಾಡಿದೆ. ವಿವಿಧ ಜ್ಞಾನ ವಲಯಗಳಲ್ಲಿ ಮಹಿಳಾ ಅಧ್ಯಯನ ಹರಡಿಕೊಂಡಿದ್ದಲ್ಲದೆ ಅವುಗಳ ಬೆಳವಣಿಗೆಗೂ ಕಾರಣವಾಗಿದೆ. ಇದನ್ನೆಲ್ಲಾ ಕೃತಿ ಬಹಳ ಹತ್ತಿರದಿಂದ ಅವಲೋಕಿಸುತ್ತದೆ. ವೈದೇಹಿ ಅವರು ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ.
©2025 Book Brahma Private Limited.