ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ

Author : ಆರ್‌.ಕೆ. ಹುಡಗಿ (ರಾಹು)

Pages 206

₹ 150.00




Year of Publication: 2013
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಭಾರತೀಯ ಮಹಿಳಾ ಚಳವಳಿಗೆ ಸ್ಫೂರ್ತಿ ಒದಗಿಸಿದ ಅಂತರರಾಷ್ಟ್ರೀಯ ಆಂದೋಲನಗಳನ್ನು ಪರಿಚಯಿಸುವ ಕೃತಿ ಇದು. ಕನಕ್‌ ಮುಖರ್ಜಿ ಇದರ ಮೂಲ ಬರಹಗಾರರಾಗಿದ್ದು ’ರಾಹು’ ಅವರು ಕನ್ನಡೀಕರಿಸಿದ್ದಾರೆ. ಎಂಗೆಲ್ಸ್, ಆಗಸ್ಟ್ ಬೆಜೆಲ್, ಕ್ಲಾರಾ ಝಟ್ ಕಿನ್, ಲಾರಾ ಲಫರ್ ಹಾಗೂ ರೋಜಾ ಲಕ್ಸೆಂಬರ್ಗ್ ಅವರು ಅಂತರರಾಷ್ಟ್ರೀಯ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿದುದನ್ನು ಕೃತಿ ದಾಖಲಿಸುತ್ತದೆ.

ಅಲ್ಲದೆ ಕಾರ್ಮಿಕ ವರ್ಗ ಹುಟ್ಟುಹಾಕಿದ  ಅಂತರರಾಷ್ಟ್ರೀಯ ಮಹಿಳಾ ವಿಮೋಚನೆಯ ಆಂದೋಲನ,  ಸಮಾಜವಾದಿ ಸೈದ್ದಾಂತಿಕ ದೃಷ್ಟಿಕೋನದ ಮಾರ್ಗದರ್ಶನದಲ್ಲಿ ನಡೆದ ಮಹಿಳಾ ಆಂದೋಲನ, ಯುರೋಪ್ ಮತ್ತು ಅಮೆರಿಕಾದ ಜನಪ್ರಿಯ ಉದಾರವಾದಿ ಚಳುವಳಿಗಳು ಭಾರತೀಯ ಸ್ತ್ರೀಪರ ಹೋರಾಟಗಳಿಗೆ ಸ್ಫೂರ್ತಿಯಾಗಿರುವುದನ್ನು ವಿವರಿಸಲಾಗಿದೆ. 

About the Author

ಆರ್‌.ಕೆ. ಹುಡಗಿ (ರಾಹು)

ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ. ಹುಡಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಕಲಬುರಗಿ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು ​​​​​. ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ...

READ MORE

Related Books