ಸ್ತ್ರೀವಾದಿ ಚಿಂತಕಿ ಕೆ.ಆರ್.ಸಂಧ್ಯಾರೆಡ್ಡಿ ಅವರು ಮಹಿಳೆಯರ ಬದುಕು-ಬವಣೆಗಳ ಕುರಿತು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಸ್ತ್ರೀ ಮನದ ಬಿಂಬ- ಪ್ರತಿಬಿಂಬ ಕೃತಿಯಲ್ಲಿ ಸ್ತ್ರೀ ಶೋಷಣೆಯ ಕುರುಹುಗಳನ್ನು ಜಾನಪದ ಕಾವ್ಯಗಳ ಮೂಲಕ ಉದಾಹರಣೆ ಸಮೇತ ವಿಶ್ಲೇಷಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಅನಾದಿಕಾಲದಿಂದಲೂ ಹೆಣ್ಣನ್ನು ಆಕೆ ಇದ್ದ ಸ್ಥಿತಿಯಲ್ಲೇ ಶೋಷಣೆಗೆ ಈಡುಮಾಡಿದ ಪರಿಯನ್ನು ಲೇಖಕರು ಸರಳವಾಗಿ ಬಿಡಿಸಿಟ್ಟಿದ್ದಾರೆ.
ಪುರಾಣ ಕತೆಗಳು, ಜಾನಪದದಲ್ಲಿ ಮಹಿಳೆಯ ಪರಿಸ್ಥಿತಿ ಹೇಗಿತ್ತು? ಎಂಬುದನ್ನು ಎಳೆ ಎಳೆಯಾಗಿ ವಿವರಿಸಲಾಗಿದೆ. ಜಾನಪದ ಸಾಹಿತ್ಯದಲ್ಲಿ ಮಹಿಳೆಯನ್ನು ನೋಡುತ್ತಿದ್ದ ರೀತಿ, ಪುರುಷಾಧಿಪತ್ಯದ ಬೇರುಗಳ ಬಲಿಷ್ಠತೆ ಇವೆಲ್ಲವನ್ನು ಲೇಖಕಿ ಸಂಧ್ಯಾರೆಡ್ಡಿ ಅವರು ವಿವರಿಸಿದ್ದಾರೆ. ಇತಿಹಾಸವೇ ಆಗಲಿ ಇಂದಿನ ವಾಸ್ತವವನ್ನೇ ಆಗಲಿ ಮಹಿಳಾ ದೃಷ್ಠಿಕೋನದಿಂದ ನೋಡಿದಲ್ಲಿ ಅದು ಭಿನ್ನವಾಗಿ ಕಾಣುತ್ತದೆ ಎಂಬುದನ್ನು ಸಂಧ್ಯಾರೆಡ್ಡಿಯವರ ಕೃತಿ ನಿರೂಪಿಸುತ್ತದೆ.
©2025 Book Brahma Private Limited.