ಪ್ರಾಚೀನ-ಸಾಂಪ್ರದಾಯಿಕ ಪುರುಷ ನಿರ್ಮಿತ ಮೌಲ್ಯಗಳನ್ನು ಮತ್ತೆ ಮತ್ತೆ ಕೆದಕಿ ಬರೆಯಲ್ಪಡುವ ಅನೇಕ ಪುಸ್ತಕಗಳಿಗೆ ಮಹಿಳೆ: ಚರಿತ್ರೆ-ಪುರಾಣ ಪುಸ್ತಕವು ತದ್ವಿರುದ್ದವಾಗಿದೆ. ಇಲ್ಲಿ ಆಧುನಿಕ ಮಹಿಳಾ ಕಾವ್ಯ ಎಂದರೆ ಕೇವಲ ಕಾಲಘಟ್ಟದ ಕುರಿತಾಗಿ ಉಲ್ಲೇಖಿಸಲಾಗಿದೆಯೇ ಹೊರತು ಸಂವೇದನೆಯ ಕುರಿತಾಗಿಯಲ್ಲ.
ಈ ಪುಸ್ತಕ ಕನ್ನಡದ ಮಹಿಳಾ ಕವಿಗಳ ಕುರಿತಾದ ಸಂಕಲನವಲ್ಲ. ವಿಶೇಷವಾಗಿ ಪುರಾಣ ಮತ್ತು ಚರಿತ್ರೆಯ ಕುರಿತಾದ ಉಲ್ಲೇಖ, ಹೇಳಿಕೆ ಅಥವಾ ಅಧ್ಯಯನಗಳಿದ್ದಲ್ಲಿ ಅವುಗಳನ್ನು ವಿಶ್ಲೇಷಿಸುವ ಕೃತಿ. ಒಂದು ಲೇಖನವಾಗಿ ರೂಪುಗೊಳ್ಳಬೇಕಾಗಿದ್ದ ವಸ್ತುವಿಷಯ ಬೆಳೆದು ಹೆಮ್ಮರವಾಗಿ ಒಂದು ಅಧ್ಯಯನ ಕೃತಿಯ ರೂಪದಲ್ಲಿ ಓದುಗರಿಗೆ ಲಭ್ಯವಿದೆ.
ಇಲ್ಲಿ ಪುರಾಣವೆಂದರೆ ಕೇವಲ ಮಹಾಭಾರತ – ರಾಮಾಯಣಕ್ಕೆ ಸೀಮಿತಗೊಳಿಸದೆ, ಜನಾಂಗೀಯ ಪರಂಪರೆ, ಪ್ರಾದೇಶಿಕ ಪರಂಪರೆ ಹಾಗೂ ಭಾಷಿಕ ಪರಂಪರೆಗಳನ್ನು ಕೂಡ ಅಭ್ಯಸಿಸಿ ಬರೆದಿರುವಂತಹ ಪ್ರಬುದ್ಧ ಲೇಖನಗಳು ಈ ಪುಸ್ತಕದಲ್ಲಿ ಇವೆ. ಪ್ರತೀ ಪುರಾಣ ಚರಿತ್ರೆಗಳನ್ನು ಮಹಿಳಾ ಕಾವ್ಯವು ಆದಿಯಿಂದಲೂ ಪ್ರಶ್ನಿಸುತ್ತಾ ಬಂದಿದೆ ಹಾಗೂ ನಿರಾಕರಿಸಿದೆ ಕೂಡ. ಹಾಗಾಗಿ ಈ ಪುಸ್ತಕದ ಎರಡನೇಯ ಭಾಗದಲ್ಲಿ ಮಹಿಳಾ ಕವಿಗಳ ಕವಿತೆಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಡಾ. ರಾಮಚಂದ್ರ ಬೇಗೂರು ಇವರ ಕನ್ನಡ ವಿದ್ವತ್ತಿಗೆ ಹಾಗೂ ಸಾಹಿತ್ಯದಲ್ಲಿ ಮಹಿಳೆಯರ ಅಸ್ಥಿತ್ವದ ಕುರಿತಾಗಿನ ಜ್ಞಾನಕ್ಕೆ ಹಿಡಿದ ಕನ್ನಡಿ ಈ ಪುಸ್ತಕ.
’ಮಹಿಳೆ ಚರಿತ್ರೆ-ಪುರಾಣ’ ಕುರಿತು ಕೃತಿಯ ಲೇಖಕರಾದ ರಾಮಲಿಂಗಪ್ಪ ಟಿ. ಬೇಗೂರು ಅವರ ಮಾತುಗಳು
©2025 Book Brahma Private Limited.