ಮಹಿಳಾ ಅಧ್ಯಯನವು ಪ್ರವರ್ಧಮಾನಕ್ಕೆ ಬಂದ ಹಾಗೆ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಚರಿತ್ರೆ ಹೀಗೆ ಎಲ್ಲ ಜ್ಞಾನ ಶಿಸ್ತುಗಳನ್ನು ಸ್ತ್ರೀವಾದಿ ದೃಷ್ಟಿಯಿಂದ ನೋಡುವ ಪ್ರಯತ್ನ ನಡೆದಿದೆ. ಈ ಎಲ್ಲ ಪ್ರಯತ್ನ ಮತ್ತು ಪ್ರಯೋಗಗಳ ಪರಿಣಾಮವಾಗಿ ಇಂದು ಸ್ತ್ರೀವಾದಿ ಪರಿಭಾಷೆಯೊಂದು ರೂಪುಗೊಂಡಿದೆ. ಲಿಂಗ ಸಂಬಂಧಿ ಪರಿಭಾಷೆಯ ತಾತ್ವಿಕ ಚೌಕಟ್ಟನ್ನು ಅರಿಯುವುದು, ಪರಿಕಲ್ಪನೆಗಳಿಗೆ ಬರಿಯ ಅರ್ಥ ನೀಡುವುದರ ಬದಲು ಮೂಲದಲ್ಲಿನ ಸಿದ್ಧಾಂತ, ಕಾಲಾನುಕ್ರಮದಲ್ಲಿ ಉಂಟಾಗುತ್ತಿರುವ ಅದರ ಅರ್ಥದಲ್ಲಿನ ಬದಲಾವಣೆಯ ನೆಲೆಗಳು, ಅದರ ಪ್ರಸ್ತುತ ಪಡೆದುಕೊಂಡಿರುವ ಅರ್ಥ ಮುಂತಾದ ಸಂಗತಿಗಳನ್ನು ಕುರಿತು ’ಮಹಿಳಾ ಅಧ್ಯಯನ ಪರಿಭಾಷೆ’ ಎಂಬ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಮಹಿಳಾ ಅಧ್ಯಯನ ಪರಿಭಾಷೆಯ ಮಾಲೆಯಡಿಯಲ್ಲಿ ಈ ಕೃತಿಯನ್ನು ಹೊರತರಲಾಗಿದೆ.
©2025 Book Brahma Private Limited.