ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠರು ಕನ್ನಡ ಸಾಹಿತ್ಯ ಲೋಕದ ಪ್ರಮುಖರು. ಒಟ್ಟು ಹದಿಮೂರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ’ಶೂನ್ಯ ಸಂಪಾದನೆಯ ಪರಾಮರ್ಶೆ’, ’ಭವ್ಯ ಮಾನವ’ ಪ್ರಮುಖ ಕೃತಿಗಳು. ಭಕ್ತಿ ಚಳವಳಿ, ಶರಣ ಸಾಹಿತ್ಯದತ್ತ ಗಮನ ಹರಿಸಿದ ಅವರು ಭಕ್ತಿ ಸುಧಾರಸ’, ‘ಗುರುರಾಜ ಚಾರಿತ್ರ’, ‘ಮೋಳಿಗೆ ಮಾರಯ್ಯ’ ಮುಂತಾದ ಕೃತಿಗಳನ್ನು ನೀಡಿದ್ದಾರೆ.
ಇವರ ’ಶೂನ್ಯ ಸಂಪಾದನೆಯ ಪರಾಮರ್ಶೆ’ ಕೃತಿಗೆ 1972 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ನವಕರ್ನಾಟಕ ಪ್ರಕಾಶನದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಲಿಕೆಯಡಿ ಪ್ರಕಟಗೊಂಡಿದೆ ಭೂಸನೂರಮಠ ಅವರನ್ನು ಪರಿಚಯಿಸುವ ಈ ಕೃತಿ.
(ಹೊಸತು, ಮಾರ್ಚ್ 2013, ಪುಸ್ತಕದ ಪರಿಚಯ)
ಸಾಹಿತ್ಯವಲಯದಲ್ಲಿ ವಿಶಿಷ್ಟ ಹೆಜ್ಜೆಗುರುತು ಮೂಡಿಸಿದ ಸಂ. ಶಿ. ಭೂಸನೂರಮಠ ಅವರು ತಮ್ಮ 'ಶೂನ್ಯ ಸಂಪಾದನೆಯ ಪರಾಮರ್ಶೆ' ಎಂಬ ದಾರ್ಶನಿಕ ವ್ಯಾಖ್ಯಾನ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದವರು. ಇವರು ವೀರಶೈವ ಸಾಹಿತ್ಯ - ವಚನಸಾಹಿತ್ಯದ ಸಾರೋವಾದ ಅಧ್ಯಯನ - ಸಂಶೋಧನೆ ಮಾಡಿದ್ದಾರೆ. ಶೈವ ಸಾಹಿತ್ಯದ ಕಣಕಣವನ್ನೂ ತಡವಿ ತಟ್ಟಿ ಪ್ರಾಮಾಣಿಕ ನೆಲೆಯಿಂದ ವಿಶ್ಲೇಷಿಸಿದ್ದಾರೆ. ಮಹಾದೇವಿಯಕ್ಕನ ಜೀವನವನ್ನಾಧರಿಸಿದ ಮಾನವನೇ ಕೇ೦ದ್ರಬಿಂದುವಾಗಿದ್ದು ಕಾವ್ಯನಾಯಕನೂ ಆಗಿರುವ 'ಭವ್ಯಮಾನವ' ಎಂಬ ಮಹಾಕಾವ್ಯವನ್ನೇ ರಚಿಸಿ ಭೂತ-ಭವಿಷ್ಯತ್ ವರ್ತಮಾನಗಳನ್ನು ಬೆಸೆದು ಕಾಲಾತೀತ ಪ್ರಜೆ ಮೂಡಿಸಿದವರಿವರು. ತಮ್ಮ ಮೂವತ್ತಾರು ವರ್ಷಗಳ ಅಧ್ಯಾಪನ ವೃತ್ತಿಜೀವನ, ನಂತರದ ಹದಿಮೂರು ವರ್ಷಗಳ ನಿವೃತ್ತಿಜೀವನದ ಬಿಡುವಿನ ಕ್ಷಣಕ್ಷಣಗಳನ್ನೂ ಜಗತ್ತಿನ ಶ್ರೇಷ್ಠ ಸಾಹಿತ್ಯಾಧ್ಯಯನದಲ್ಲಿ ಕಳೆದಿದ್ದಾರೆ. ಉತ್ಕೃಷ್ಟವಾದದ್ದು ಎಲ್ಲ ದಿಕ್ಕುಗಳಿಂದ ಹರಿದುಬರಲಿ ಎಂಬ ಉದಾರತೆ ಇವರನ್ನು ಹೀಗೆ ಶೈವ ಕಕ್ಷಾಧ್ಯಯನದಿಂದ ಅಪಾರ ಅನುಭವ ಗಳಿಸಿದ ಇವರು ಯಾವುದೇ ತಡೆಗೋಡೆಗಳಿಲ್ಲದ ಬಯಲ ತತ್ವವನ್ನು ನಂಬಿದ್ದವರು. ಇವರ ಜೀವನ-ಚಿಂತನ- ಸಾಹಿತ್ಯವನ್ನು ಇಂದಿನ ಪೀಳಿಗೆಗೆ ಅವಶ್ಯವಾಗಿ ಪರಿಚಯಿಸಬೇಕು. ಭೂಸನೂರಮಠದ ತಿಷ್ಠೆಯಾಗಿದ್ದು, ನಿಕಟವರ್ತಿಯಾಗಿದ್ದು, ಅವರ ಸಾಧನೆಯನ್ನು ಬಲ್ಲ ಡಾ|| ಶಾಂತಾ ಇಮ್ರಾಪೂರ ಈ ಕೃತಿಯ ಮೂಲಕ ಅವರನ್ನು ಪರಿಚಯಿಸಿದ್ದಾರೆ. ನವಕರ್ನಾಟಕ ಸಾಹಿತ್ಯ ಸಂಪದ ಮಾಲೆಯ ಕೃತಿಯಿದು.
©2024 Book Brahma Private Limited.