ಕನ್ನಡ ಸಾರಸ್ವತ ಜಗತ್ತನ್ನು ಸಮೃದ್ಧಗೊಳಿಸಿದ ಮಹಿಳಾ ಸಾಹಿತಿಗಳಲ್ಲಿ ’ವೈದೇಹಿ’ ಅಗ್ರಗಣ್ಯರು. ಜಾನಕಿ ಶ್ರೀನಿವಾಸಮೂರ್ತಿ ಅವರ ನಿಜನಾಮ. ಕರಾವಳಿಯ ಬದುಕು ಮತ್ತು ಸ್ತ್ರೀಪರ ಧ್ವನಿ ಅವರ ಸೃಜನಶೀಲತೆಯ ಶಕ್ತಿಕೇಂದ್ರ.
’ಮರ ಗಿಡ ಬಳ್ಳಿ’, ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿ, ಅಂತರಂಗದ ಪುಟಗಳು, ಗೋಲ, ಅಮ್ಮಚ್ಚಿ ಎಂಬ ನೆನಪು, ಕ್ರೌಂಚ ಪಕ್ಷಿಗಳು ಇವರ ಪ್ರಮುಖ ಕಥಾ ಸಂಕಲನಗಳು. ಬಿಂದು ಬಿಂದಿಗೆ, ಹೂವಕಟ್ಟುವ ಕಾಯಕ’, ’ಪಾರಿಜಾತ’ ಕವಿತೆಗಳ ಗುಚ್ಛ. ಮಲ್ಲಿನಾಥನ ಧ್ಯಾನ ಅವರ ಲೇಖನ ಸಂಕಲನಗಳಲ್ಲಿ ಪ್ರಮುಖವಾದುದು. ಹಿಂದಿ, ಮಲೆಯಾಳಂ, ತಮಿಳು, ತೆಲುಗು, ಗುಜರಾತಿ ಮತ್ತಿತರ ಭಾಷೆಗಳಿಗೆ ಅವರ ಕೃತಿಗಳು ಅನುವಾದಗೊಂಡಿವೆ. ’ಗುಲಾಬಿ ಟಾಕೀಸು’ ’ಅಮ್ಮಚ್ಚಿಯೆಂಬ ನೆನಪು’ ಕತೆಗಳು ಸಿನಿಮಾ ಆಗಿವೆ.
'ಕ್ರೌಂಚ ಪಕ್ಷಿಗಳು' ಸಣ್ಣ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ನವಕರ್ನಾಟಕ ಪ್ರಕಾಶನಕ್ಕಾಗಿ ಅವರ ಬದುಕನ್ನು ಚಿತ್ರಿಸಿಕೊಟ್ಟಿದ್ದಾರೆ ಲೇಖಕಿ ಸ. ಉಷಾ.
©2025 Book Brahma Private Limited.